ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕಚ್ಚಾ ತೈಲ: ಪ್ರತಿ ಬ್ಯಾರೆಲ್‌ಗೆ 44 ಡಾಲರ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಚ್ಚಾ ತೈಲ: ಪ್ರತಿ ಬ್ಯಾರೆಲ್‌ಗೆ 44 ಡಾಲರ್
ಬುಧವಾರದಂದು ನಡೆಯಲಿರುವ ಒಪೆಕ್ ರಾಷ್ಟ್ರಗಳ ಸಭೆಯಲ್ಲಿ ಉತ್ಪಾದನೆ ಕಡಿತ ಘೋಷಿಸುವ ಸಾಧ್ಯತೆಗಳಿವೆ ಎನ್ನುವ ನಿರೀಕ್ಷೆಯ ಮಧ್ಯೆ ತೈಲ ದರ ಸ್ಥಿರವಾಗಿದ್ದು, ಪ್ರತಿ ಬ್ಯಾರೆಲ್‌ಗೆ 44 ಡಾಲರ್‌ಗಳಾಗಿವೆ ಎಂದು ಮೂಲಗಳು ತಿಳಿಸಿವೆ.

ನ್ಯೂಯಾರ್ಕ್ ಮಾರುಕಟ್ಟೆಯ ಜನೆವರಿ ತಿಂಗಳ ವಿತರಣೆಯಲ್ಲಿ ಪ್ರತಿ ಬ್ಯಾರೆಲ್‌ಗೆ 1.77 ಡಾಲರ್‌ ಇಳಿಕೆಯಾಗಿ 44.45ಡಾಲರ್‌ಗಳಿಗೆ ತಲುಪಿದೆ.

ಜಾಗತಿಕ ಕಚ್ಚಾ ತೈಲ ಸರಬರಾಜಿನಲ್ಲಿ ಶೇ. 40ರಷ್ಟು ಪಾಲನ್ನು ಹೊಂದಿರುವ ಒಪೆಕ್, ಬುಧವಾರದಂದು ಅಲ್ಜೀರಿಯಾದಲ್ಲಿ ನಡೆಯಲಿರುವ ಸಭೆಯ ನಂತರ ತೈಲ ಉತ್ಪಾದನೆ ಕಡಿತವನ್ನು ಘೋಷಿಸಲಿದೆ ಎಂದು ಒಪೆಕ್ ಮೂಲಗಳು ತಿಳಿಸಿವೆ.

ಒಪೆಕ್ ಸದಸ್ಯ ರಾಷ್ಟ್ರಗಳು ಪ್ರತಿ ದಿನ ಎರಡು ಮಿಲಿಯನ್ ಬ್ಯಾರೆಲ್‌ಗಳ ಕಚ್ಚಾ ತೈಲ ಉತ್ಪಾದನೆಯನ್ನು ಕಡಿತಗೊಳಿಸುವ ನಿರ್ಧಾರಕ್ಕೆ ಬರುವ ಸಾಧ್ಯತೆಗಳಿವೆ ಎಂದು ಒಪೆಕ್ ಅಧ್ಯಕ್ಷ ಚಾಕೀಬ್ ಖೇಲಿಲ್ ಹೇಳಿದ್ದಾರೆ.

ಕಚ್ಚಾ ತೈಲ ದರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್‌ಗೆ 70 ರಿಂದ 80 ಡಾಲರ್‌ಗೆ ನಿಗದಿಯಾದಲ್ಲಿ ಮಾತ್ರ ತೈಲ ಉತ್ಪಾದಕರಿಗೆ ಲಾಭವಾಗಲಿದೆ ಇಲ್ಲವಾದಲ್ಲಿ ತೈಲ ಉತ್ಪಾದಕರು ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಖೇಲಿಲ್ ಹೇಳಿದ್ದಾರೆ.

ಒಪೆಕ್ ಕಚ್ಚಾ ತೈಲ ಸರಬರಾಜಿನಲ್ಲಿ ಕಡಿತಗೊಳಿಸಿದಾಗ ಜಾಗತಿಕ ಮಾರುಕಟ್ಟೆಯಲ್ಲಿ ಸಮತೋಲನ ಕಂಡುಬರುತ್ತದೆ ಎಂದು ಕುವೈತ್‌ನ ತೈಲ ಸಚಿವ ಮೊಹಮ್ಮದ್ ಅಲ್-ಆಲೀಮ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತೈಲ ಉತ್ಪಾದನೆ ಕಡಿತಕ್ಕೆ ಆದ್ಯತೆ: ಒಪೆಕ್
65 ಸಾ. ಉದ್ಯೋಗಿಗಳ ಹುದ್ದೆ ಕಡಿತ
ಗೃಹ ಸಾಲಕ್ಕೆ ಬಡ್ಡಿ ದರ ಕಡಿತ
ತಾಜ್‌ ಗ್ರೂಪ್‌ನಿಂದ ಕ್ಷೇಮಾಭ್ಯುದಯ ನಿಧಿ
ತೈಲ ಉತ್ಪಾದನೆ ಕಡಿತಕ್ಕೆ ಒಪೆಕ್ ಸಿದ್ದತೆ
ಅಟೋ ಪರಿಹಾರ ಪ್ಯಾಕೇಜ್ ವಿಳಂಬ :ಬುಷ್