ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಇಂಡಿಯನ್‌ ಬ್ಯಾಂಕ್‌ನಿಂದ ಬಡ್ಡಿ ದರ ಕಡಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂಡಿಯನ್‌ ಬ್ಯಾಂಕ್‌ನಿಂದ ಬಡ್ಡಿ ದರ ಕಡಿತ
ಸಾರ್ವಜನಿಕ ಸ್ವಾಮ್ಯದ ಇಂಡಿಯನ್ ಬ್ಯಾಂಕ್, ಡಿಸೆಂಬರ್ 15ರಿಂದ ಅನ್ವಯವಾಗುವಂತೆ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

46-90 ದಿನಗಳ ಸ್ಥಿರ ಠೇವಣಿಗಳ ಮೇಲೆ ಶೇ.7.5ರಷ್ಟಿದ್ದ ಬಡ್ಡಿ ದರವನ್ನು ಶೇ.6ಕ್ಕೆ ಇಳಿಸಲಾಗಿದೆ ಎಂದು ಮುಂಬೈ ಶೇರುಪೇಟೆಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದೆ.

91 ರಿಂದ 120 ದಿನಗಳವರೆಗಿನ ಠೇವಣಿಗೆ ಮೊದಲು ಶೇ.8 ರಷ್ಟಿದ್ದ ಬಡ್ಡಿ ದರವನ್ನು ಶೇ.7ಕ್ಕೆ ಇಳಿಸಲಾಗಿದೆ. ಎರಡು ವರ್ಷದಿಂದ ಮೂರು ವರ್ಷದೊಳಗಿನ ಠೇವಣಿಗಳಿಗೆ ಮೊದಲಿದ್ದ ಶೇ9.50 ಬಡ್ಡಿ ದರವನ್ನು ಕಡಿತಗೊಳಿಸಿ ಶೇ.9.25ಕ್ಕೆ ಇಳಿಸಲಾಗಿದೆ.

ಮೂರು ವರ್ಷದಿಂದ ಐದು ವರ್ಷದೊಳಗಿನ ಠೇವಣಿಗಳಿಗೆ ಶೇ9.50 ಬಡ್ಡಿ ದರವನ್ನು ಕಡಿತಗೊಳಿಸಿ ಶೇ.9.25ಕ್ಕೆ ಇಳಿಸಲಾಗಿದೆ. ಐದು ವರ್ಷ ಮತ್ತು ಐದು ವರ್ಷಗಳಿಗಂತ ಅಧಿಕ ಅವಧಿಯ ಠೇವಣಿಗಳಿಗೆ ಶೇ.9.50ರಷ್ಟು ನಿಗದಿಪಡಿಸಲಾಗಿದೆ ಎಂದು ಉನ್ನತ ಬ್ಯಾಂಕ್‌ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಚ್ಚಾ ತೈಲ: ಪ್ರತಿ ಬ್ಯಾರೆಲ್‌ಗೆ 44 ಡಾಲರ್
ತೈಲ ಉತ್ಪಾದನೆ ಕಡಿತಕ್ಕೆ ಆದ್ಯತೆ: ಒಪೆಕ್
65 ಸಾ. ಉದ್ಯೋಗಿಗಳ ಹುದ್ದೆ ಕಡಿತ
ಗೃಹ ಸಾಲಕ್ಕೆ ಬಡ್ಡಿ ದರ ಕಡಿತ
ತಾಜ್‌ ಗ್ರೂಪ್‌ನಿಂದ ಕ್ಷೇಮಾಭ್ಯುದಯ ನಿಧಿ
ತೈಲ ಉತ್ಪಾದನೆ ಕಡಿತಕ್ಕೆ ಒಪೆಕ್ ಸಿದ್ದತೆ