ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮಡೊಫ್ ವಂಚನೆಗೆ ತತ್ತರಿಸಿದ ಬ್ಯಾಂಕ್‌ಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಡೊಫ್ ವಂಚನೆಗೆ ತತ್ತರಿಸಿದ ಬ್ಯಾಂಕ್‌ಗಳು
ನ್ಯೂಯಾರ್ಕ್ : ಬರ್ನಾರ್ಡ್ ಮಡೊಫ್ ಸಂಚಾಲಿತ ಯೋಜನೆಯಲ್ಲಿ ಹೂಡಿಕೆ ಮಾಡಿದ ಯುರೋಪಿಯನ್ನರು ನೂರಾರು ಬಿಲಿಯನ್ ಡಾಲರ್ ನಷ್ಟ ಅನುಭವಿಸುತ್ತಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಯುರೋಪಿಯನ್ ಬ್ಯಾಂಕ್, ಸ್ಪೇನ್‌ನ ಗ್ರುಪೊ ಸಾಂಟೆಂಡರ್ ಮತ್ತು ಫ್ರಾನ್ಸ್‌ನ ಬಿಎನ್‌ಪಿ ಪರಿಬಾಸ್ ಬ್ಯಾಂಕ್‌ಗಳು ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಮಡೊಫ್ ಯೋಜನೆಯಲ್ಲಿ ಹೂಡಿಕೆ ಮಾಡಿದ ತಮ್ಮ ಗ್ರಾಹಕರು ಹಾಗೂ ಶೇರುದಾರರು ನೂರಾರು ಬಿಲಿಯನ್ ಡಾಲರ್‌ಗಳ ನಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿವೆ.

ಯುರೋಪ್‌ನ ಪ್ರಮುಖ ಬ್ಯಾಂಕ್ ಸಾಂಟೆಂಡರ್, ತಮ್ಮ ಗ್ರಾಹಕರು ಮಡೊಫ್‌ ಯೋಜನೆಯಲ್ಲಿ ಹೂಡಿಕೆ ಮಾಡಿ 3.1ಬಿಲಿಯನ್ ಡಾಲರ್ ಕಳೆದುಕೊಂಡಿದ್ದಾರೆ ಎಂದು ಹೇಳಿಕೆ ನೀಡಿದೆ.

ಫ್ರಾನ್ಸ್‌ನ ನಂಬರ್ ಒನ್ ಸ್ಥಾನದಲ್ಲಿರುವ ಬಿಎನ್‌ಪಿ ಪರಿಬಾಸ್ ಬ್ಯಾಂಕ್ ಕೂಡಾ ತಮ್ಮ ಗ್ರಾಹಕರು ಮಡೊಫ್ ವಂಚನೆಯಲ್ಲಿ 350ಮಿಲಿಯನ್ ಯುರೋಗಳನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿಕೆ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಫ್‌ಡಿಐ ಒಳಹರಿವಿನಲ್ಲಿ ಶೇ.26ರಷ್ಟು ಕುಸಿತ
ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಇಳಿಕೆ ಸಾಧ್ಯತೆ
ಇಂಡಿಯನ್‌ ಬ್ಯಾಂಕ್‌ನಿಂದ ಬಡ್ಡಿ ದರ ಕಡಿತ
ಕಚ್ಚಾ ತೈಲ: ಪ್ರತಿ ಬ್ಯಾರೆಲ್‌ಗೆ 44 ಡಾಲರ್
ತೈಲ ಉತ್ಪಾದನೆ ಕಡಿತಕ್ಕೆ ಆದ್ಯತೆ: ಒಪೆಕ್
65 ಸಾ. ಉದ್ಯೋಗಿಗಳ ಹುದ್ದೆ ಕಡಿತ