ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಪರೋಕ್ಷ ತೆರಿಗೆ ಸಂಗ್ರಹದಲ್ಲಿ ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪರೋಕ್ಷ ತೆರಿಗೆ ಸಂಗ್ರಹದಲ್ಲಿ ಕುಸಿತ
PTI
ತೆರಿಗೆ ಕಡಿತ ಹಾಗೂ ಆರ್ಥಿಕ ಕುಸಿತದಿಂದಾಗಿ ನವೆಂಬರ್ ತಿಂಗಳಲ್ಲಿ ಅಬಕಾರಿ ಮತ್ತು ಕಸ್ಟಮ್ಸ್‌ನ ಪರೋಕ್ಷ ತೆರಿಗೆಯಲ್ಲಿ ಕ್ರಮವಾಗಿ ಶೇ.15, ಹಾಗೂ ಶೇ.0.8 ರಷ್ಟು ಸಂಗ್ರಹದಲ್ಲಿ ಕುಸಿತವಾಗಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

ಅಬಕಾರಿ ತೆರಿಗೆ ಸಂಗ್ರಹ ನವೆಂಬರ್ ತಿಂಗಳಲ್ಲಿ 10,065 ಕೋಟಿ ರೂಪಾಯಿಗಳಿಂದ 8,556ಕೋಟಿ ರೂ.ಗಳಿಗೆ ಕುಸಿತವಾಗಿದೆ.ಕಸ್ಟಮ್ಸ್ ತೆರಿಗೆ ನವೆಂಬರ್ ತಿಂಗಳಲ್ಲಿ 9,005 ಕೋಟಿ ರೂಪಾಯಿಗಳಿಂದ 8,931 ಕೋಟಿ ರೂಪಾಯಿಗಳಿಗೆ ಇಳಿಕೆಯಾಗಿದೆ ಎಂದು ಸರಕಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಸಕ್ತ ವರ್ಷದ ಆರಂಭಿಕ ಎಂಟು ತಿಂಗಳಲ್ಲಿ ಅಬಕಾರಿ ತೆರಿಗೆ 73,878 ಕೋಟಿವ ರೂಪಾಯಿಗಳಿಂದ 75,013 ಕೋಟಿ ರೂ.ಗಳಿಗೆ ಇಳಿಕೆಯಾಗಿ ಶೇ.1.5 ರಷ್ಟು ಕುಸಿತವಾಗಿದೆ.

ಕಸ್ಟಮ್ಸ್ ತೆರಿಗೆ ಸಂಗ್ರಹ 75,551 ಕೋಟಿ ರೂಪಾಯಿಗಳಿಂದ 66,838 ಕೋಟಿ ರೂ.ಗಳಿಗೆ ಇಳಿಕೆಯಾಗಿ ಶೇ.13ರಷ್ಟು ಕುಸಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಡೊಫ್ ವಂಚನೆಗೆ ತತ್ತರಿಸಿದ ಬ್ಯಾಂಕ್‌ಗಳು
ಎಫ್‌ಡಿಐ ಒಳಹರಿವಿನಲ್ಲಿ ಶೇ.26ರಷ್ಟು ಕುಸಿತ
ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಇಳಿಕೆ ಸಾಧ್ಯತೆ
ಇಂಡಿಯನ್‌ ಬ್ಯಾಂಕ್‌ನಿಂದ ಬಡ್ಡಿ ದರ ಕಡಿತ
ಕಚ್ಚಾ ತೈಲ: ಪ್ರತಿ ಬ್ಯಾರೆಲ್‌ಗೆ 44 ಡಾಲರ್
ತೈಲ ಉತ್ಪಾದನೆ ಕಡಿತಕ್ಕೆ ಆದ್ಯತೆ: ಒಪೆಕ್