ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಒಪೆಕ್ ಸಭೆ : ಕಚ್ಚಾ ತೈಲ ದರ ಹೆಚ್ಚಳ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಪೆಕ್ ಸಭೆ : ಕಚ್ಚಾ ತೈಲ ದರ ಹೆಚ್ಚಳ
PTI
ಕಚ್ಚಾ ತೈಲ ದರ ನಿರಂತರ ಕುಸಿಯುತ್ತಿರುವುದರಿಂದ ಉತ್ಪಾದನೆಯನ್ನು ಕಡಿತಗೊಳಿಸಲು ಒಪೆಕ್ ನಿರ್ಧರಿಸಿರುವಂತೆ ಏಷ್ಯಾ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಏರಿಕೆಯಾಗಿದೆ.

ನ್ಯೂಯಾರ್ಕ್ ಶೇರುಪೇಟೆಯ ಜನೆವರಿ ತಿಂಗಳ ಸರಬರಾಜಿನಲ್ಲಿ ಕಚ್ಚಾ ತೈಲ 59 ಸೆಂಟ್‌ಗಳ ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 44.19 ಡಾಲರ್‌ಗಳಿಗೆ ಏರಿಕೆಯಾಗಿದೆ ಎಂದು ಶೇರುಪೇಟೆಯ ಮೂಲಗಳು ತಿಳಿಸಿವೆ

ಮಂಗಳವಾರದ ಶೇರುಪೇಟೆಯಲ್ಲಿ 91 ಸೆಂಟ್‌ಗಳ ಕುಸಿತ ಕಂಡು ಪ್ರತಿ ಬ್ಯಾರೆಲ್‌ಗೆ 43.60 ಡಾಲರ್‌ಗಳಿಗೆ ಇಳಿಕೆಯಾಗಿತ್ತು.

ಇಂದು ಅಲ್ಜೀರಿಯಾದಲ್ಲಿ ಒಪೆಕ್ ಸಭೆ ನಡೆಯಲಿರುವುದರಿಂದ ಸಭೆಯ ನಿರ್ಣಯಗಳ ಬಗ್ಗೆ ವಹಿವಾಟುದಾರರು ನಿರೀಕ್ಷಿಸುತ್ತಿದ್ದಾರೆ ಎಂದು ವಹಿವಾಟಿನ ಮೂಲಗಳು ತಿಳಿಸಿವೆ.

ಒಪೆಕ್‌ನ 13 ರಾಷ್ಟ್ರಗಳು ಜಾಗತಿಕವಾಗಿ ಶೇ.40 ರಷ್ಟು ತೈಲವನ್ನು ಸರಬರಾಜು ಮಾಡುತ್ತಿದ್ದು, ಪ್ರತಿ ದಿನ ಎರಡು ಮಿಲಿಯನ್ ಬ್ಯಾರೆಲ್‌ ಕಡಿತಗೊಳಿಸುವ ಕುರಿತಂತೆ ಒಪೆಕ್ ಆದೇಶ ಹೊರಡಿಸಲಿದೆ ಎಂದು ಸೌದಿ ಅರೇಬಿಯಾದ ತೈಲ ಸಚಿವರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಪರೋಕ್ಷ ತೆರಿಗೆ ಸಂಗ್ರಹದಲ್ಲಿ ಕುಸಿತ
ಮಡೊಫ್ ವಂಚನೆಗೆ ತತ್ತರಿಸಿದ ಬ್ಯಾಂಕ್‌ಗಳು
ಎಫ್‌ಡಿಐ ಒಳಹರಿವಿನಲ್ಲಿ ಶೇ.26ರಷ್ಟು ಕುಸಿತ
ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಇಳಿಕೆ ಸಾಧ್ಯತೆ
ಇಂಡಿಯನ್‌ ಬ್ಯಾಂಕ್‌ನಿಂದ ಬಡ್ಡಿ ದರ ಕಡಿತ
ಕಚ್ಚಾ ತೈಲ: ಪ್ರತಿ ಬ್ಯಾರೆಲ್‌ಗೆ 44 ಡಾಲರ್