ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹೂಡಿಕೆದಾರರ ಅಕ್ರೋಶ: ಮೆಟಾಸ್ ಖರೀದಿ ರದ್ದು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೂಡಿಕೆದಾರರ ಅಕ್ರೋಶ: ಮೆಟಾಸ್ ಖರೀದಿ ರದ್ದು
ಮೆಟಾಸ್ ಕಂಪೆನಿ ಹಾಗೂ ಮೆಟಾಸ್ - ಇನ್‌ಫ್ರಾ ಕಂಪೆನಿಯ ಶೇ51 ರಷ್ಟು ಶೇರುಗಳನ್ನು ಖರೀದಿಸುವ ಆರಂಭಿಕ ನಿರ್ಧಾರ ಸೂಕ್ತ ವಾಗಿದ್ದರೂ ಹೂಡಿಕೆದಾರರ ಅಕ್ರೋಶದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಯಿತು ಎಂದು ಸತ್ಯ ಕಂಪ್ಯೂಟರ್ಸ್ ಮೂಲಗಳು ತಿಳಿಸಿವೆ.

ಮೆಟಾಸ್ ಮೆಗಾ ಖರೀದಿ ಒಪ್ಪಂದದಿಂದ ಹೂಡಿಕೆದಾರರಿಗೆ ಉತ್ತಮ ಬೆಲೆಯನ್ನು ಕಂದುಕೊಡುತ್ತಿತ್ತು ಎಂದು ಸತ್ಯಂ ಕಂಪ್ಯೂಟರ್ಸ್ ಸರ್ವಿಸಸ್ ಮುಖ್ಯಸ್ಥ ರಾಮಲಿಂಗಾ ರಾಜು ಖಾಸಗಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಹೂಡಿಕೆದಾರರು ಹಾಗೂ ಶೇರುದಾರರು ಕಂಪೆನಿಯ ಅಡಳಿತ ಮಂಡಳಿಯ ಕಾರ್ಯವೈಖರಿ ಬಗ್ಗೆ ಟೀಕೆಗಳ ಹಿನ್ನೆಲೆಯಲ್ಲಿ ಸತ್ಯಂ ಮುಖ್ಯಸ್ಥ ರಾಜು ಮಾತನಾಡಿ, ಅಡಳಿತ ಮಂಡಳಿ, ಹೂಡಿಕೆದಾರರು ಮತ್ತು ಶೇರುದಾರರ ವಿಚಾರಧಾರೆಗಳಲ್ಲಿ ಭಿನ್ನಾಭಿಪ್ರಾಯವಿರಬಹುದು. ಮೆಟಾಸ್ ಕಂಪೆನಿಯ ಖರೀದಿಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಅನುಸರಿಸಲಾಗಿದೆ ಎಂದು ನುಡಿದರು.

ಜಾಗತಿಕ ಆರ್ಥಿಕ ಕುಸಿತದಿಂದಾಗಿ ದೇಶದ ಮಾಹಿತಿ ತಂತ್ರಜ್ಞಾನ ಹಾಗೂ ಬಿಪಿಒ ಕ್ಷೇತ್ರಗಳ ವಹಿವಾಟಿನಲ್ಲಿ ಕುಸಿತವಾಗುತ್ತದೆ ಎನ್ನುವುದು ಸರಿಯಲ್ಲ. ದೇಶದ ಸಾಫ್ಟ್‌ವೇರ್ ವಹಿವಾಟು ಎಂದಿನಂತೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

ಮೆಟಾಸ್ ಕಂಪೆನಿಯನ್ನು ಸ್ವಾಧೀನಪಡಿಸಿಕೊಳ್ಳುವುದರಿಂದ ಸತ್ಯಂ ಕಂಪ್ಯೂಟರ್ಸ್ ಸರ್ವಿಸಸ್‌ಗೆ ಉತ್ತಮ ಅವಕಾಶ ದೊರೆತಂತಾಗುತ್ತಿತ್ತು. ಆದರೆ ಹೂಡಿಕೆದಾರರು ಹಾಗೂ ಶೇರುದಾರರು ವಿರೋಧ ವ್ಯಕ್ತಪಡಿಸಿದ್ದರಿಂದ ಖರೀದಿ ಒಪ್ಪಂದವನ್ನು ರದ್ದುಗೊಳಿಸಬೇಕಾಯಿತು ಎಂದು ಸತ್ಯ ಮುಖ್ಯಸ್ಥ ರಾಮಲಿಂಗಾ ರಾಜು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಒಪೆಕ್ ಸಭೆ : ಕಚ್ಚಾ ತೈಲ ದರ ಹೆಚ್ಚಳ
ಪರೋಕ್ಷ ತೆರಿಗೆ ಸಂಗ್ರಹದಲ್ಲಿ ಕುಸಿತ
ಮಡೊಫ್ ವಂಚನೆಗೆ ತತ್ತರಿಸಿದ ಬ್ಯಾಂಕ್‌ಗಳು
ಎಫ್‌ಡಿಐ ಒಳಹರಿವಿನಲ್ಲಿ ಶೇ.26ರಷ್ಟು ಕುಸಿತ
ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಇಳಿಕೆ ಸಾಧ್ಯತೆ
ಇಂಡಿಯನ್‌ ಬ್ಯಾಂಕ್‌ನಿಂದ ಬಡ್ಡಿ ದರ ಕಡಿತ