ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಫಿಯೆಟ್‌ನಿಂದ 50 ಸಾವಿರ ನೌಕರರ ವಜಾ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫಿಯೆಟ್‌ನಿಂದ 50 ಸಾವಿರ ನೌಕರರ ವಜಾ?
webdunia
ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ಕಾರುಗಳ ಬೇಡಿಕೆ ಕುಸಿದ ಹಿನ್ನೆಲೆಯಲ್ಲಿ ಫಿಯೆಟ್ ಗ್ರೂಪ್ ಪ್ರಥಮ ಬಾರಿಗೆ ಇಟಲಿಯಲ್ಲಿರುವ ಕಾರು ತಯಾರಿಕೆ ಘಟಕಗಳಲ್ಲಿ ಉತ್ಪಾದನೆಯನ್ನು ಸ್ಥಗಿತಗೊಳಿಸಿ 50 ಸಾವಿರ ನೌಕಕರಿಗೆ ಒಂದು ತಿಂಗಳ ಅವಧಿಗೆ ರಜೆ ಘೋಷಿಸಿದೆ.

ಮುಂಬರುವ ಜನೆವರಿ 14 ರ ವರಗೆ ರಜೆಯನ್ನು ಘೋಷಿಸಲಾಗಿದ್ದು, ಇಟಲಿಯಲ್ಲಿರುವ 20 ಘಟಕಗಳನ್ನು ಸ್ಥಗಿತಗೊಳಿಸಿ 80 ಸಾವಿರ ಉದ್ಯೋಗಿಗಳಲ್ಲಿ 48 ಸಾವಿರ ನೌಕರರಿಗೆ ಕಡ್ಡಾಯ ರಜೆ ಘೋಷಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ತಾತ್ಕಾಲಿಕ ವಜಾ ಯೋಜನೆಯಲ್ಲಿ ರಜೆಯಲ್ಲಿರುವ ನೌಕರರಿಗೆ ಸರಕಾರ ಹಾಗೂ ಕಂಪೆನಿ ಜಂಟಿಯಾಗಿ ಸಂಬಳವನ್ನು ನೀಡಲಾಗುವುದು ಎಂದು ಕಂಪೆನಿಯ ಅಡಳಿತ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.

ಯುರೋಪ್ ಮಾರುಕಟ್ಟೆಯ ನವೆಂಬರ್ ತಿಂಗಳ ಅವಧಿಯಲ್ಲಿ ಕಾರುಗಳ ಮಾರಾಟ ಶೇ.26 ರಷ್ಟು ಇಳಿಕೆಯಾಗಿದ್ದು, ಫಿಯೆಟ್ ಕಾರುಗಳ ಮಾರಾಟದಲ್ಲಿ ಶೇ.30 ರಷ್ಟು ಕುಸಿತವಾಗಿದೆ.

ಯುರೋಪ್ ಮಾರುಕಟ್ಟೆಯಲ್ಲಿ ವಾಹನಗಳ ಮಾರಾಟ ಕುಸಿತ ಕಂಡರೂ ಶೇರುಪೇಟೆಯಲ್ಲಿ ಶೇ.8.3ರಷ್ಟು ಏರಿಕೆ ಕಂಡಿದೆ ಎಂದು ಫಿಯೆಟ್ ಗ್ರೂಪ್ ಅಟೋಮೊಬೈಲ್ಸ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಫಿಯೆಟ್ ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ 94,600 ಕಾರುಗಳನ್ನು ಮಾರಾಟ ಮಾಡಿ ದಾಖಲೆ ಸ್ಥಾಪಿಸಿತ್ತು. ಆದರೆ ಪ್ರಸಕ್ತ ವರ್ಷ 71 ಸಾವಿರ ಕಾರುಗಳನ್ನು ಮಾರಾಟ ಮಾಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹೂಡಿಕೆದಾರರ ಅಕ್ರೋಶ: ಮೆಟಾಸ್ ಖರೀದಿ ರದ್ದು
ಒಪೆಕ್ ಸಭೆ : ಕಚ್ಚಾ ತೈಲ ದರ ಹೆಚ್ಚಳ
ಪರೋಕ್ಷ ತೆರಿಗೆ ಸಂಗ್ರಹದಲ್ಲಿ ಕುಸಿತ
ಮಡೊಫ್ ವಂಚನೆಗೆ ತತ್ತರಿಸಿದ ಬ್ಯಾಂಕ್‌ಗಳು
ಎಫ್‌ಡಿಐ ಒಳಹರಿವಿನಲ್ಲಿ ಶೇ.26ರಷ್ಟು ಕುಸಿತ
ಪೆಟ್ರೋಲ್, ಡೀಸೆಲ್ ದರ ಮತ್ತಷ್ಟು ಇಳಿಕೆ ಸಾಧ್ಯತೆ