ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಯುಕೋ ಬ್ಯಾಂಕ್‌ನಿಂದ ಬಡ್ಡಿ ದರ ಕಡಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಯುಕೋ ಬ್ಯಾಂಕ್‌ನಿಂದ ಬಡ್ಡಿ ದರ ಕಡಿತ
ಸಾರ್ವಜನಿಕ ಕ್ಷೇತ್ರದ ಯುಕೋ ಬ್ಯಾಂಕ್‌,ಠೇವಣಿ ಹಾಗೂ ಸಾಲದ ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸಲಾಗಿದ್ದು, ಮುಂಬರುವ ಜನೆವರಿ 1 ರಿಂದ ಅನ್ವಯವಾಗಲಿದೆ ಎಂದು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಜನೆವರಿ 1 ರಿಂದ ಠೇವಣಿ ಹಾಗೂ ಸಾಲದ ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸಲಾಗಿದೆ.ಡಿಸೆಂಬರ್ 26 ರಂದು ಬ್ಯಾಂಕ್‌ ಅಡಳಿತ ಮಂಡಳಿಯ ಸಭೆ ನಡೆಯಲಿದೆ ಎಂದು ಬ್ಯಾಂಕ್‌ನ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್‌.ಕೆ.ಗೊಯಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಯುಕೋ ಬ್ಯಾಂಕ್‌75 ಬೇಸಿಸ್ ಪಾಯಿಂಟ್‌ಗಳನ್ನು ಕಡಿತಗೊಳಿಸಲಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಹಣದುಬ್ಬರಕ್ಕೆ ಹೋಲಿಸಿ ಬಡ್ಡಿ ದರ ಕಡಿತ ಮಾಡಲಾಗುವುದು. ಆದರೆ ಎಷ್ಟರ ಮಟ್ಟಿಗೆ ಕಡಿತ ಮಾಡಲಾಗುವುದು ಎಂದು ಹೇಳುವುದು ಕಠಿಣವಾಗುತ್ತದೆ ಎಂದು ತಿಳಿಸಿದ್ದಾರೆ.

ಇಂಡಿಯನ್ ಬ್ಯಾಂಕ್ ಠೇವಣಿಗಳ ಮೇಲೆ ಡಿಸೆಂಬರ್ 15 ರಿಂದ ಅನ್ವಯವಾಗುವಂತೆ 150 ಬೇಸಿಸ್ ಪಾಯಿಂಟ್‌ಗಳನ್ನು ಕಡಿತ ಘೋಷಿಸಿತ್ತು. 46-90 ದಿನಗಳ ಸ್ಠಿರ ಠೇವಣಿಗಳ ಮೇಲೆ ಶೇ.7.5ರಷ್ಟಿದ್ದ ಬಡ್ಡಿ ದರವನ್ನು ಶೇ.6ಕ್ಕೆ ಇಳಿಕೆ ಮಾಡಲಾಗಿದೆ ಎಂದು ಮುಂಬೈ ಶೇರುಪೇಟೆಗೆ ಇಂಡಿಯನ್ ಬ್ಯಾಂಕ್‌ ಸಲ್ಲಿಸಿದ ಮಾಹಿತಿಯಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫಿಯೆಟ್‌ನಿಂದ 50 ಸಾವಿರ ನೌಕರರ ವಜಾ?
ಹೂಡಿಕೆದಾರರ ಅಕ್ರೋಶ: ಮೆಟಾಸ್ ಖರೀದಿ ರದ್ದು
ಒಪೆಕ್ ಸಭೆ : ಕಚ್ಚಾ ತೈಲ ದರ ಹೆಚ್ಚಳ
ಪರೋಕ್ಷ ತೆರಿಗೆ ಸಂಗ್ರಹದಲ್ಲಿ ಕುಸಿತ
ಮಡೊಫ್ ವಂಚನೆಗೆ ತತ್ತರಿಸಿದ ಬ್ಯಾಂಕ್‌ಗಳು
ಎಫ್‌ಡಿಐ ಒಳಹರಿವಿನಲ್ಲಿ ಶೇ.26ರಷ್ಟು ಕುಸಿತ