ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 2009ರಲ್ಲಿ 2 ಸಾವಿರ ಎಸ್‌ಬಿಐ ಶಾಖೆಗಳು ಆರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
2009ರಲ್ಲಿ 2 ಸಾವಿರ ಎಸ್‌ಬಿಐ ಶಾಖೆಗಳು ಆರಂಭ
ದೇಶಧ ನಂಬರ್ ಒನ್ ಸ್ಥಾನದಲ್ಲಿರುವ ಸಾರ್ವಜನಿಕ ಕ್ಷೇತ್ರದ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ ಮುಂದಿನ ವರ್ಷದಲ್ಲಿ 2 ಸಾವಿರ ಶಾಖೆಗಳನ್ನು ತೆರೆಯಲು ಉದ್ದೇಶಿಸಿದೆ ಎಂದು ಬ್ಯಾಂಕ್‌ ಮೂಲಗಳು ತಿಳಿಸಿವೆ.

ಮುಂಬರುವ ವರ್ಷದ ಆರ್ಥಿಕ ಸಾಲಿನಲ್ಲಿ ದೇಶದಾದ್ಯಂತ 2 ಸಾವಿರ ಶಾಖೆಗಳನ್ನು ಆರಂಭಿಸಲಾಗುವುದು ಎಂದು ಪಶ್ಚಿಮ ಬಂಗಾಳ ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕ ಜಯಂತ್ ಕುಮಾರ್ ಸಿನ್ಹಾ ಹೇಳಿದ್ದಾರೆ.

ಬೆಂಗಾಲ್ ನ್ಯಾಷನಲ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀ ಆಯೋಜಿಸಿದ ಸಭೆಯಲ್ಲಿ ಮಾತನಾಡಿದ ಸಿನ್ಹಾ ಪ್ರಸಕ್ತ ವರ್ಷದಲ್ಲಿ 1 ಸಾವಿರ ಶಾಖೆಗಳನ್ನು ಆರಂಭಿಸಲಾಗಿದ್ದು, ದೇಶದಲ್ಲಿ ಒಟ್ಟು 11,009 ಶಾಖೆಗಳನ್ನು ಆರಂಭಿಸಿದಂತಾಗಿದೆ ಎಂದು ತಿಳಿಸಿದ್ದಾರೆ.

ಜಾಗತಿಕ ಆರ್ಥಿಕ ಕುಸಿತದಿಂದಾಗಿ ಬ್ಯಾಂಕಿಂಗ್ ಕ್ಷೇತ್ರ ಅಲ್ಪಮಟ್ಟಿನ ಹಿನ್ನೆಡೆ ಸಾಧಿಸಿದೆ. ಮುಂಬರುವ ದಿನಗಳಲ್ಲಿ ಚೇತರಿಸಿಕೊಳ್ಳುವ ಭರವಸೆಯಿದೆ ಎಂದು ಮುಖ್ಯ ಪ್ರಧಾನ ವ್ಯವಸ್ಥಾಪಕ ಜಯಂತ್ ಕುಮಾರ್ ಸಿನ್ಹಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಯುಕೋ ಬ್ಯಾಂಕ್‌ನಿಂದ ಬಡ್ಡಿ ದರ ಕಡಿತ
ಫಿಯೆಟ್‌ನಿಂದ 50 ಸಾವಿರ ನೌಕರರ ವಜಾ?
ಹೂಡಿಕೆದಾರರ ಅಕ್ರೋಶ: ಮೆಟಾಸ್ ಖರೀದಿ ರದ್ದು
ಒಪೆಕ್ ಸಭೆ : ಕಚ್ಚಾ ತೈಲ ದರ ಹೆಚ್ಚಳ
ಪರೋಕ್ಷ ತೆರಿಗೆ ಸಂಗ್ರಹದಲ್ಲಿ ಕುಸಿತ
ಮಡೊಫ್ ವಂಚನೆಗೆ ತತ್ತರಿಸಿದ ಬ್ಯಾಂಕ್‌ಗಳು