ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮಡೊಫ್‌ಗೆ ಜಾಮೀನು, ಗೃಹಬಂಧನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಡೊಫ್‌ಗೆ ಜಾಮೀನು, ಗೃಹಬಂಧನ
ದೇಶದಾದ್ಯಂತ 50 ಬಿಲಿಯನ್ ಡಾಲರ್‌ಗಳ ವಂಚಿಸಿದ ಆರೋಪವನ್ನು ಹೊತ್ತಿರುವ ಬರ್ನಾರ್ಡ್ ಮಡೊಫ್ ಅವರಿಗೆ ನ್ಯಾಯಾಲಯ ಜಾಮೀನು ನೀಡಿದ್ದು ಗೃಹಬಂಧನದಲ್ಲಿರಿಸಲಾಗಿದೆ. ಬಿಎನ್‌ಪಿ ಪರಿಬಾಸ್ ಬ್ಯಾಂಕ್‌ಗೆ ಮಡೊಫ್ ಹಗರಣದಲ್ಲಿ ಭಾರಿ ಹಾನಿ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ

ಮ್ಯಾನ್‌ಹಟನ್ ಅಪಾರ್ಟ್‌ಮೆಂಟ್‌ನಲ್ಲಿರುವ 70 ವರ್ಷ ವಯಸ್ಸಿನ ಮಡೊಫ್ ಹಾಗೂ ಅವರ ಪತ್ನಿಯ ಪಾಸ್‌ಪೋರ್ಟ್‌ಗಳನ್ನು ಗುರುವಾರದೊಳಗಾಗಿ ನ್ಯಾಯಾಲಯಕ್ಕೆ ಒಪ್ಪಿಸುವಂತೆ ಫೆಡರಲ್ ನ್ಯಾಯಾಧೀಶರು ಪೊಲೀಸರಿಗೆ ಆದೇಶಿಸಿದ್ದಾರೆ.

ಮಡೊಫ್ ಅವರನ್ನು ಮ್ಯಾನ್‌ಹಟನ್ ನಿವಾಸದಲ್ಲಿ ಗೃಹಬಂಧನದಲ್ಲಿರಿಸಲಾಗಿದ್ದು ಕೈಗಳಿಗೆ ಎಲೆಕ್ಟ್ರಾನಿಕ್ ಉಪಕರಣಗಳ ಸಂಕೋಲೆಯನ್ನು ತೊಡಿಸಲಾಗಿದ್ದು, ಪೊಲೀಸರ ಅನುಮತಿಯಿಲ್ಲದೇ ಯಾರನ್ನು ಭೇಟಿ ಮಾಡುವಂತಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮಡೊಫ್ ಇನ್‌ವೆಸ್ಟ್‌ಮೆಂಟ್‌ ಅಡ್ವೈಸರಿ ಫರ್ಮ್‌ ಕುರಿತಂತೆ ಯುಎಸ್ ಸೆಕ್ಯೂರಿಟೀಸ್ ಆಂಡ್ ಎಕ್ಸಚೇಂಜ್ ಕಮಿಷನ್ ನಿರ್ಲ್ಯಕ್ಷ ವಹಿಸಿದ ಹಿನ್ನೆಲೆಯಲ್ಲಿ 50 ಬಿಲಿಯನ್ ಡಾಲರ್ ವಂಚನೆಗೆ ಕಾರಣವಾಗಿದ್ದು, ಜಾಮೀನು ಶರತ್ತುಗಳಲ್ಲಿ ಬದಲಾವಣೆ ತರುವಂತೆ ನಾಸಡಾಕ್‌ ಮುಖ್ಯಸ್ಥ ರು ಆದೇಶಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
2009ರಲ್ಲಿ 2 ಸಾವಿರ ಎಸ್‌ಬಿಐ ಶಾಖೆಗಳು ಆರಂಭ
ಯುಕೋ ಬ್ಯಾಂಕ್‌ನಿಂದ ಬಡ್ಡಿ ದರ ಕಡಿತ
ಫಿಯೆಟ್‌ನಿಂದ 50 ಸಾವಿರ ನೌಕರರ ವಜಾ?
ಹೂಡಿಕೆದಾರರ ಅಕ್ರೋಶ: ಮೆಟಾಸ್ ಖರೀದಿ ರದ್ದು
ಒಪೆಕ್ ಸಭೆ : ಕಚ್ಚಾ ತೈಲ ದರ ಹೆಚ್ಚಳ
ಪರೋಕ್ಷ ತೆರಿಗೆ ಸಂಗ್ರಹದಲ್ಲಿ ಕುಸಿತ