ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಫೆರಾರಿ ಪ್ರಾಯೋಜಕತ್ವ ಪಡೆದ ಟಾಟಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫೆರಾರಿ ಪ್ರಾಯೋಜಕತ್ವ ಪಡೆದ ಟಾಟಾ
PTI
ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ತೊಂದರೆಯಲ್ಲಿದ್ದ ಫಾರ್ಮುಲಾ ಒನ್‌ನ‌ ಫೆರಾರಿ ಕಂಪೆನಿ, ಟಾಟಾ ಕಂಪೆನಿಯೊಂದಿಗೆ ಪ್ರಾಯೋಜಕತ್ವ ಒಪ್ಪಂದಕ್ಕೆ ಸಹಿ ಹಾಕಿದ್ದು, ಫೆರಾರಿ ಪ್ರಾಯೋಜಕತ್ವ ಪಡೆದ ಮೊದಲ ಭಾರತೀಯ ಕಂಪೆನಿ ಎನ್ನುವ ಹೆಗ್ಗಳಿಕೆ ಟಾಟಾ ಮೋಟಾರ್ಸ್‌ಗೆ ಲಭಿಸಿದೆ.

ಫಾರ್ಮುಲಾ‌ ಒನ್‌ ರೇಸ್‌ನಲ್ಲಿರುವ ಕಾರುಗಳ ಮೇಲೆ ಪ್ರಪ್ರಥಮ ಬಾರಿಗೆ ಭಾರತೀಯ ಬ್ರ್ಯಾಂಡ್‌ ರಾರಾಜಿಸಲಿದೆ.ಇದೊಂದು ಐತಿಹಾಸಿಕ ಒಪ್ಪಂದವಾಗಿದೆ ಎಂದು ಫೆರಾರಿ ಅಧ್ಯಕ್ಷ ಲುಕಾಡಿ ಮೊಟೆಝ್‌ಮೊಲೊ ಇಟಲಿಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಫೆರಾರಿ ಹಾಗೂ ಟಾಟಾ ನಡುವಣ ಒಪ್ಪಂದವನ್ನು ಫೆರಾರಿ ವಕ್ತಾರರು ಖಚಿತಪಡಿಸಿದ್ದು, ವಿವರಗಳು ಹಾಗೂ ಒಪ್ಪಂದದ ಅವಧಿಯನ್ನು ಶೀಘ್ರದಲ್ಲಿ ಘೋಷಿಸಲಾಗುವುದು ಎಂದು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಟಾಟಾ ಮತ್ತು ಫೆರಾರಿಯ ಮೂಲ ಕಂಪೆನಿಯಾದ ಫಿಯೆಟ್‌, ಜಂಟಿ ಸಹಭಾಗಿತ್ವದಲ್ಲಿ ಕಾರುಗಳ ತಯಾರಿಕೆಯಲ್ಲಿ ತೊಡಗಿವೆ.

ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹೊಂಡಾ ಕಂಪೆನಿ ಸ್ಪರ್ಧೆಯಿಂದ ಹೊರಬಿದ್ದ ನಂತರ ಫಾರ್ಮುಲಾ ಒನ್ ಕಂಪೆನಿ, ಕಳೆದ ವಾರ ವೆಚ್ಚ ಕಡಿತ ಪ್ಯಾಕೇಜ್ ಘೋಷಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶೇ.6.84ಕ್ಕೆ ತಲುಪಿದ ಹಣದುಬ್ಬರ
ಮಡೊಫ್‌ಗೆ ಜಾಮೀನು, ಗೃಹಬಂಧನ
2009ರಲ್ಲಿ 2 ಸಾವಿರ ಎಸ್‌ಬಿಐ ಶಾಖೆಗಳು ಆರಂಭ
ಯುಕೋ ಬ್ಯಾಂಕ್‌ನಿಂದ ಬಡ್ಡಿ ದರ ಕಡಿತ
ಫಿಯೆಟ್‌ನಿಂದ 50 ಸಾವಿರ ನೌಕರರ ವಜಾ?
ಹೂಡಿಕೆದಾರರ ಅಕ್ರೋಶ: ಮೆಟಾಸ್ ಖರೀದಿ ರದ್ದು