ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ತೈಲ ದರ : ಪ್ರತಿ ಬ್ಯಾರೆಲ್‌ಗೆ 36.26ಡಾಲರ್‌
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತೈಲ ದರ : ಪ್ರತಿ ಬ್ಯಾರೆಲ್‌ಗೆ 36.26ಡಾಲರ್‌
PTI
ದರ ಕುಸಿತದ ಹಿನ್ನೆಲೆಯಲ್ಲಿ ಒಪೆಕ್ ತೈಲ ಉತ್ಪಾದನೆಯನ್ನು ಕಡಿತಗೊಳಿಸುವುದಾಗಿ ಘೋಷಿಸುತ್ತಿದ್ದಂತೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ 36 ಡಾಲರ್‌‌ಗೆ ಇಳಿಕೆಯಾಗಿದೆ.

ನ್ಯೂಯಾರ್ಕ್ ಶೇರುಪೇಟೆಯ ಜನೆವರಿ ತಿಂಗಳ ಕಚ್ಚಾ ತೈಲ ವಿತರಣೆಯಲ್ಲಿ ಪ್ರತಿ ಬ್ಯಾರೆಲ್‌ಗೆ 36.26 ಡಾಲರ್ ದರ ನಿಗದಿಯಾಗಿದೆ ಎಂದು ವಹಿವಾಟಿನ ಮೂಲಗಳು ತಿಳಿಸಿವೆ.

ಜುಲೈ 2004ರ ನಂತರ ಪ್ರಥಮ ಬಾರಿಗೆ ಪ್ರತಿ ಬ್ಯಾರೆಲ್‌ಗೆ 3.84 ಡಾಲರ್‌ ಇಳಿಕೆಯಾಗಿ 36.22 ಡಾಲರ್‌ಗಳಿಗೆ ತಲುಪಿ ನ್ಯೂಯಾರ್ಕ್ ಶೇರುಪೇಟೆಯಲ್ಲಿ ದಾಖಲೆಯ ಕುಸಿತವಾಗಿದೆ.

ಲಂಡನ್ ಶೇರುಪೇಟೆಯಲ್ಲಿ ಫೆಬ್ರವರಿ ತಿಂಗಳ ತೈಲ ವಿತರಣೆಯಲ್ಲಿ ಪ್ರತಿ ಬ್ಯಾರೆಲ್‌ಗೆ 2.17ಡಾಲರ್ ಏರಿಕೆಯಾಗಿ 43.36ಡಾಲರ್‌ಗಳಿಗೆ ತಲುಪಿದೆ. ಜಾಗತಿಕ ಆರ್ಥಿಕ ಕುಸಿತದಿಂದಾಗಿ ತೈಲ ಬೇಡಿಕೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಜುಲೈ ತಿಂಗಳಲ್ಲಿ ಪ್ರತಿ ಬ್ಯಾರೆಲ್‌ಗೆ 147 ಡಾಲರ್‌ಗಳಿದ್ದ ತೈಲ ದರ 36ಡಾಲರ್‌ಗಳಿಗೆ ಇಳಿಕೆಯಾಗಿದೆ.

ಒಪೆಕ್ ಸದಸ್ಯ ರಾಷ್ಟ್ರಗಳು ಅಲ್ಜೀರಿಯಾದಲ್ಲಿ ಸಭೆ ಸೇರಿ ಪ್ರತಿ ದಿನ 2.2 ಮಿಲಿಯನ್ ಬ್ಯಾರೆಲ್‌ಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿತ್ತು.ಒಪೆಕ್ ಪ್ರತಿನಿತ್ಯ 27.3 ಮಿಲಿಯನ್ ಬ್ಯಾರೆಲ್‌ಗಳ ತೈಲವನ್ನು ಉತ್ಪಾದಿಸುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶೀಘ್ರದಲ್ಲಿ ಮತ್ತೆ ತೈಲ ದರ ಕಡಿತ ?
ಫೆರಾರಿ ಪ್ರಾಯೋಜಕತ್ವ ಪಡೆದ ಟಾಟಾ
ಶೇ.6.84ಕ್ಕೆ ತಲುಪಿದ ಹಣದುಬ್ಬರ
ಮಡೊಫ್‌ಗೆ ಜಾಮೀನು, ಗೃಹಬಂಧನ
2009ರಲ್ಲಿ 2 ಸಾವಿರ ಎಸ್‌ಬಿಐ ಶಾಖೆಗಳು ಆರಂಭ
ಯುಕೋ ಬ್ಯಾಂಕ್‌ನಿಂದ ಬಡ್ಡಿ ದರ ಕಡಿತ