ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ದೇಶಕ್ಕೆ ಆರ್ಥಿಕ ಸಂಕಷ್ಟದ ಸಮಯ:ಚಿದಂಬರಂ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೇಶಕ್ಕೆ ಆರ್ಥಿಕ ಸಂಕಷ್ಟದ ಸಮಯ:ಚಿದಂಬರಂ
PTI
ಜಾಗತಿಕ ಆರ್ಥಿಕ ಕುಸಿತದಿಂದಾಗಿ ದೇಶಕ್ಕೆ ಎದುರಾಗಿರುವ ಕಠಿಣ ಅವಧಿಯಲ್ಲಿ ಜನತೆಯ ಖಾಸಗಿ ಸಂಸ್ಥೆಗಳ ಸಹಕಾರ ಅಗತ್ಯವಾಗಿದ್ದು, ದೇಶದ ಆರ್ಥಿಕ ಅಭಿವೃದ್ಧಿ ದರ ಶೇ.7 ರ ಗಡಿಯನ್ನು ತಲುಪಲಿದೆ ಎಂದು ಕೇಂದ್ರ ಗೃಹಖಾತೆ ಸಚಿವ ಪಿ.ಚಿದಂಬರಂ ವಿಶ್ವಾಸ ವ್ಯಕ್ತಪಡಿಸಿದರು.

ಆರ್ಥಿಕ ಸ್ಥಿತಿಗತಿ ಕುರಿತಂತೆ ಲೋಕಸಭೆಯಲ್ಲಿ ಮಾತನಾಡಿದ ಚಿದಂಬರಂ, ಪ್ರಸಕ್ತ ವರ್ಷ ಆರ್ಥಿಕವಾಗಿ ಕಠಿಣವಾಗಿದ್ದರೂ ಸರಕಾರ ಕೃಷಿ ,ಕೈಗಾರಿಕೆ ಮತ್ತು ಸೇವಾ ಕ್ಷೇತ್ರಗಳಿಗೆ ಹೆಚ್ಚಿನ ಅದ್ಯತೆಯನ್ನು ನೀಡುತ್ತಿದೆ ಎಂದು ತಿಳಿಸಿದರು.

ಆರ್ಥಿಕ ಅಭಿವೃದ್ಧಿ ದರವನ್ನು ಹೆಚ್ಚಿಸುವ ವಿಶ್ವಾಸವಿದ್ದು, 2007-08ರಲ್ಲಿ ಶೇ.9 ರಷ್ಟಿದ್ದ ಆರ್ಥಿಕ ಅಭಿವೃದ್ಧಿ ದರ ಪ್ರಸಕ್ತ ವರ್ಷದಲ್ಲಿ ಜಿಡಿಪಿ ಶೇ.7ರ ಗಡಿಯನ್ನು ತಲುಪುವ ಸಾಧ್ಯತೆಗಳಿವೆ. ಭಾರತೀಯ ರಿಸರ್ವ್ ಬ್ಯಾಂಕ್‌ ಶೇ.7.5ರಿಂದ ಶೇ8 ರಷ್ಟಾಗಲಿದೆ ಎಂದು ಮುನ್ಸೂಚನೆ ನೀಡಿದೆ ಎಂದು ಸಚಿವ ಚಿದಂಬರಂ ಹೇಳಿದರು.

ನಾನು ಹಣಕಾಸು ಸಚಿವರಾಗಿದ್ದಾಗ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಜೊತೆಯಲ್ಲಿ ಬ್ಯಾಂಕ್‌ಗಳ ಮುಖ್ಯಸ್ಥರೊಂದಿಗೆ ಸಮಾಲೋಚಿಸಿದ್ದು, ದೇಶದಲ್ಲಿರುವ ಎಲ್ಲ ಕ್ಷೇತ್ರಗಳಿಗೆ ಸಾಲ ನೀಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಸಚಿವ ಚಿದಂಬರಂ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತೈಲ ದರ : ಪ್ರತಿ ಬ್ಯಾರೆಲ್‌ಗೆ 36.26ಡಾಲರ್‌
ಶೀಘ್ರದಲ್ಲಿ ಮತ್ತೆ ತೈಲ ದರ ಕಡಿತ ?
ಫೆರಾರಿ ಪ್ರಾಯೋಜಕತ್ವ ಪಡೆದ ಟಾಟಾ
ಶೇ.6.84ಕ್ಕೆ ತಲುಪಿದ ಹಣದುಬ್ಬರ
ಮಡೊಫ್‌ಗೆ ಜಾಮೀನು, ಗೃಹಬಂಧನ
2009ರಲ್ಲಿ 2 ಸಾವಿರ ಎಸ್‌ಬಿಐ ಶಾಖೆಗಳು ಆರಂಭ