ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬಿರ್ಲಾ ಟೈರ್ಸ್ ಘಟಕ ಸ್ಥಗಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿರ್ಲಾ ಟೈರ್ಸ್ ಘಟಕ ಸ್ಥಗಿತ
ಟೈರುಗಳ ಬೇಡಿಕೆ ಕುಸಿತವಾದ ಹಿನ್ನೆಲೆಯಲ್ಲಿ, ಒರಿಸ್ಸಾದ ಬಾಲಸೊರ್‌ನಲ್ಲಿರುವ ಬಿರ್ಲಾ ಟೈರ್ ಘಟಕವನ್ನು 15 ದಿನಗಳ ಅವಧಿಗೆ ಬಂದ್ ಮಾಡಲು ಬಿ.ಕೆ.ಬಿರ್ಲಾ ಸಂಚಾಲಿತ ಕೆಸೊರಾಮ್ ಇಂಡಸ್ಟ್ರೀಸ್ ಲಿಮಿಟೆಡ್ ನಿರ್ಧರಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಪ್ರಸಕ್ತ ಸನ್ನಿವೇಶದಲ್ಲಿ ಟೈರುಗಳು ಬೇಡಿಕೆ ಕುಸಿತವಾಗಿದ್ದರಿಂದ ಸಾಮಾನ್ಯ ರೀತಿಯಂತೆ ಘಟಕವನ್ನು ಮುಂದುವರಿಸಲು ಸಾಧ್ಯವಾಗದು. ಆದ್ದರಿಂದ ಡಿಸೆಂಬರ್ 17 ರಿಂದ 15 ದಿನಗಳ ಅವಧಿಗೆ ಘಟಕವನ್ನು ಮುಚ್ಚಲು ಅಡಳಿತ ಮಂಡಳಿ ತೀರ್ಮಾನಿಸಿದೆ ಎಂದು ಬಿರ್ಲಾ ಟೈರ್ಸ್‌ನ ಹಿರಿಯ ಅಧ್ಯಕ್ಷ ಡಿ.ಟಂಡನ್ ಹೇಳಿದ್ದಾರೆ.

ಮುಂದಿನ 15 ದಿನಗಳ ನಂತರ ಆರ್ಥಿಕ ಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳಾಗದಿದ್ದಲ್ಲಿ ಮತ್ತು ಉತ್ಪನ್ನ ಕಡಿತ ಮಾಡುವುದು ಅಗತ್ಯವಾಗಿದೆ ಎಂದು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉತ್ಪಾದನೆ ಕಡಿತ ಹಾಗೂ ಘಟವನ್ನು ಸ್ಥಗಿತಗೊಳಿಸುವ ಅಡಳಿತ ಮಂಡಳಿಯ ನಿರ್ಧಾರವನ್ನು ಸಮರ್ಥಿಸಿಕೊಂಡ ಕಂಪೆನಿಯ ಹಿರಿಯ ಅಧಿಕಾರಿಗಳು ಅಕ್ಟೋಬರ್‌ ತಿಂಗಳಿನಿಂದ ಉತ್ಪಾದನೆ ಕಡಿತ ಮಾಡುತ್ತಲೇ ಬಂದಿದ್ದೇವೆ ಎಂದು ಹೇಳಿದ್ದಾರೆ.





ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ದೇಶಕ್ಕೆ ಆರ್ಥಿಕ ಸಂಕಷ್ಟದ ಸಮಯ:ಚಿದಂಬರಂ
ತೈಲ ದರ : ಪ್ರತಿ ಬ್ಯಾರೆಲ್‌ಗೆ 36.26ಡಾಲರ್‌
ಶೀಘ್ರದಲ್ಲಿ ಮತ್ತೆ ತೈಲ ದರ ಕಡಿತ ?
ಫೆರಾರಿ ಪ್ರಾಯೋಜಕತ್ವ ಪಡೆದ ಟಾಟಾ
ಶೇ.6.84ಕ್ಕೆ ತಲುಪಿದ ಹಣದುಬ್ಬರ
ಮಡೊಫ್‌ಗೆ ಜಾಮೀನು, ಗೃಹಬಂಧನ