ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಐಸಿಐಸಿಐ ಸಿಇಒ ಸ್ಥಾನಕ್ಕೆ ಕೊಚರ್ ನೇಮಕ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಐಸಿಐಸಿಐ ಸಿಇಒ ಸ್ಥಾನಕ್ಕೆ ಕೊಚರ್ ನೇಮಕ
ಮುಂಬೈಯಲ್ಲಿ ನಡೆದ ಐಸಿಐಸಿಐ ಬ್ಯಾಂಕ್ ಅಡಳಿತ ಮಂಡಳಿ ನಿರ್ದೇಶಕರ ಸಭೆಯಲ್ಲಿ ನೂತನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರ ಸ್ಥಾನಕ್ಕೆ ಚಂದಾ ಕೊಚರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಬ್ಯಾಂಕ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಹಣಕಾಸು ಅಧಿಕಾರಿಗಳಾಗಿದ್ದ ಚಂದಾ ಕೊಚರ್, ಮುಂಬರುವ ಎಪ್ರಿಲ್ 01 ರಂದು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಬ್ಯಾಂಕ್‌ನ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಮಾಜಿ ಸಿಇಒ ಕೆ.ವಿ. ಕಾಮತ್, ಎಪ್ರಿಲ್ 30 ರಂದು ನಿವೃತ್ತಿಯಾದ ನಂತರ ನಾನ್‌-ಎಕ್ಸಿಕ್ಯೂಟಿವ್ ಮಖ್ಯಸ್ಥರಾಗಲಿದ್ದು, ಮೇ 1 ರಂದು ಕೊಚರ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹುದ್ದೆಯನ್ನು ಅಲಂಕರಿಸಲಿದ್ದಾರೆ.

ನನ್ನ ಮೇಲೆ ವಿಶ್ವಾಸವಿರಿಸಿ ಸಿಇಒ ಹುದ್ದೆಗೆ ನೇಮಕ ಮಾಡಿರುವುದಕ್ಕೆ ಅಡಳಿತ ಮಂಡಳಿಗೆ ಅಭಿನಂದನೆಗಳು. ಮಾಜಿ ಸಿಇಒ ಕಾಮತ್ ಅವರ ನಾಯಕತ್ವದ ಸ್ಪೂರ್ತಿ ಹಾಗೂ ಸಹದ್ಯೋಗಿಗಳ ಸಂಪೂರ್ಣ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುವುದಾಗಿ ಕೊಚರ್ ಹೇಳಿದ್ದಾರೆ.

ಚಂದಾ ಕೊಚರ್, ಫಾರ್ಚ್ಯೂನ್ ಮ್ಯಾಗ್‌ಜಿನ್‌ನ ವಾರ್ಷಿಕ ಪಟ್ಟಿಯಲ್ಲಿ ಜಗತ್ತಿನ ಪ್ರಭಾವಿ ಮಹಿಳಾ ಉದ್ಯಮಿ ಎನ್ನುವ ಗೌರವಕ್ಕೆ ಪಾತ್ರರಾಗಿದ್ದರು.

ಕಾಮತ್ 1971ರಿಂದ ಐಸಿಐಸಿಐ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, 1996ರಲ್ಲಿ ಐಸಿಐಸಿಐ ಬ್ಯಾಂಕ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಹುದ್ದೆಯನ್ನು ವಹಿಸಿಕೊಂಡಿದ್ದರು. ಅದೇ ವರ್ಷ ಕೇಂದ್ರ ಸರಕಾರದ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದಿದ್ದರು ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಬಿರ್ಲಾ ಟೈರ್ಸ್ ಘಟಕ ಸ್ಥಗಿತ
ದೇಶಕ್ಕೆ ಆರ್ಥಿಕ ಸಂಕಷ್ಟದ ಸಮಯ:ಚಿದಂಬರಂ
ತೈಲ ದರ : ಪ್ರತಿ ಬ್ಯಾರೆಲ್‌ಗೆ 36.26ಡಾಲರ್‌
ಶೀಘ್ರದಲ್ಲಿ ಮತ್ತೆ ತೈಲ ದರ ಕಡಿತ ?
ಫೆರಾರಿ ಪ್ರಾಯೋಜಕತ್ವ ಪಡೆದ ಟಾಟಾ
ಶೇ.6.84ಕ್ಕೆ ತಲುಪಿದ ಹಣದುಬ್ಬರ