ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬ್ಲ್ಯಾಕ್ ಬೆರ್ರಿ: ತ್ರೈಮಾಸಿಕ ಆದಾಯದಲ್ಲಿ ಹೆಚ್ಚಳ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ಲ್ಯಾಕ್ ಬೆರ್ರಿ: ತ್ರೈಮಾಸಿಕ ಆದಾಯದಲ್ಲಿ ಹೆಚ್ಚಳ
ರಿಸರ್ಚ್ ಇನ್‌ ಮೊಷನ್ ಕಂಪೆನಿಯ ಉತ್ಪನ್ನವಾದ ಬ್ಲ್ಯಾಕ್ ಬೆರ್ರಿ, ಮೂರನೇ ತ್ರೈಮಾಸಿಕ ಅವಧಿಯಲ್ಲಿ 2.78 ಬಿಲಿಯನ್ ಡಾಲರ್‌ ಆದಾಯದಲ್ಲಿ ಹೆಚ್ಚಳವಾಗಿ ಶೇ.66ರಷ್ಟು ನಿವ್ವಳ ಲಾಭಗಳಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಕಳೆದ ವರ್ಷದ ವಹಿವಾಟಿನಲ್ಲಿ 370.5 ಮಿಲಿಯನ್ ಡಾಲರ್‌ಗಳ ಆದಾಯವಾಗಿದ್ದು, ಪ್ರಸಕ್ತ ವರ್ಷದ ಮೂರನೇ ತ್ರೈಮಾಸಿಕ ಅವಧಿಯಲ್ಲಿ 396.3 ಮಿಲಿಯನ್ ಡಾಲರ್‌ಗಳ ಆದಾಯದಲ್ಲಿ ಹೆಚ್ಚಳವಾಗಿದೆ ಎಂದು ರಿಸರ್ಚ್ ಇನ್ ಮೊಷನ್ ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಟೊರೆಂಟೊ ಮೂಲದ ಬ್ಲ್ಯಾಕ್ ಬೆರ್ರಿ ಕಂಪೆನಿ, 2.6 ಮಿಲಿಯನ್ ನೂತನ ಗ್ರಾಹಕರನ್ನು ಸೇರ್ಪಡೆಗೊಳಿಸುವುದರೊಂದಿಗೆ ಗ್ರಾಹಕರ ಸಂಖ್ಯೆ 21 ಮಿಲಿಯನ್‌ಗೆ ತಲುಪಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ರಿಮ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಮ್ ಬಾಲ್‌ಸಿಲೈ ಮಾತನಾಡಿ, ಮೂರನೇ ತ್ರೈಮಾಸಿಕ ಆದಾಯದಲ್ಲಿ ದಾಖಲೆಯ ಲಾಭಗಳಿಸಿದ್ದು, ಜಾಗತಿಕ ಆರ್ಥಿಕ ಸವಾಲಿನ ಮಧ್ಯೆಯು ನಾಲ್ಕನೇ ತ್ರೈಮಾಸಿಕದಲ್ಲಿ ಲಾಭದತ್ತ ದಾಪುಗಾಲು ಹಾಕುತ್ತಿದ್ದೆವೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಐಸಿಐಸಿಐ ಸಿಇಒ ಸ್ಥಾನಕ್ಕೆ ಕೊಚರ್ ನೇಮಕ
ಬಿರ್ಲಾ ಟೈರ್ಸ್ ಘಟಕ ಸ್ಥಗಿತ
ದೇಶಕ್ಕೆ ಆರ್ಥಿಕ ಸಂಕಷ್ಟದ ಸಮಯ:ಚಿದಂಬರಂ
ತೈಲ ದರ : ಪ್ರತಿ ಬ್ಯಾರೆಲ್‌ಗೆ 36.26ಡಾಲರ್‌
ಶೀಘ್ರದಲ್ಲಿ ಮತ್ತೆ ತೈಲ ದರ ಕಡಿತ ?
ಫೆರಾರಿ ಪ್ರಾಯೋಜಕತ್ವ ಪಡೆದ ಟಾಟಾ