ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಗೃಹ ಸಾಲ ಬಡ್ಡಿದರದಲ್ಲಿ ಶೇ.0.5ರಷ್ಟು ಕಡಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೃಹ ಸಾಲ ಬಡ್ಡಿದರದಲ್ಲಿ ಶೇ.0.5ರಷ್ಟು ಕಡಿತ
ಗೃಹ ಸಚಿವ ಪಿ.ಚಿದಂಬರಂ ಅವರ ಮನವಿಗೆ ಸ್ಪಂದಿಸಿದ ಎಚ್‌ಡಿಎಫ್‌ಸಿ ಬ್ಯಾಂಕ್ ಶುಕ್ರವಾರದಂದು ಗೃಹಸಾಲಗಳ ಮೇಲೆ ಶೇ.0.5 ರಷ್ಟು ಬಡ್ಡಿ ದರವನ್ನು ಕಡಿತಗೊಳಿಸಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಗ್ರಾಹಕರು 20 ಲಕ್ಷ ರೂಪಾಯಿಗಿಂತ ಕಡಿಮೆಯಿರುವ ಗೃಹಸಾಲಕ್ಕೆ ಶೇ.10.25 ರಷ್ಟು ಬಡ್ಡಿ ದರವನ್ನು ನಿಗದಿಪಡಿಸಲಾಗಿದ್ದು,20 ಲಕ್ಷಕ್ಕಿಂತ ಅಧಿಕ ಸಾಲಕ್ಕೆ ಶೇ.11.25 ರಷ್ಟು ಬಡ್ಡಿ ದರ ನಿಗದಿಪಡಿಸಲಾದಗಿದೆ. ನೂತನ ಬಡ್ಡಿ ದರಗಳು ಕೂಡಲೇ ಜಾರಿಗೆ ಬಂದಿದ್ದು, ಪ್ರಸ್ತುತ ಗೃಹಸಾಲದ ಗ್ರಾಹಕರಿಗೆ ಜನೆವರಿಯಿಂದ ಅನ್ವಯವಾಗಲಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಎಚ್‌ಡಿಎಫ್‌ಸಿ ಬ್ಯಾಂಕ್ ಠೇವಣಿ ಬಡ್ಡಿ ದರದ ಮೇಲೆ 50 ಬೇಸಿಸ್ ಪಾಯಿಂಟ್‌ಗಳನ್ನು ಕಡಿತಗೊಳಿಸಲು ನಿಪರ್ಧರಿಸಿದೆ ಎಂದು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಬ್ಯಾಂಕ್‌ನ ಸಮೀಪದ ಪ್ರತಿಸ್ಪರ್ಧಿ ಐಸಿಐಸಿಐ ಬ್ಯಾಂಕ್, ತಿಂಗಳ ಆರಂಭದಲ್ಲಿ 150 ಬೇಸಿಸ್ ಪಾಯಿಂಟ್ಸ್‌ಗಳನ್ನು ಕಡಿತಗೊಳಿಸಿ 20 ಲಕ್ಷ ಗೃಹ ಸಾಲಕ್ಕೆ ಶೇ.11.50 ಬಡ್ಡಿ ದರ ನಿಗದಿಗೊಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತೈಲ ದರ ಕಡಿತಕ್ಕೆ ರಾಜಕೀಯ ಪಕ್ಷಗಳ ಒತ್ತಡ
ಬ್ಲ್ಯಾಕ್ ಬೆರ್ರಿ: ತ್ರೈಮಾಸಿಕ ಆದಾಯದಲ್ಲಿ ಹೆಚ್ಚಳ
ಐಸಿಐಸಿಐ ಸಿಇಒ ಸ್ಥಾನಕ್ಕೆ ಕೊಚರ್ ನೇಮಕ
ಬಿರ್ಲಾ ಟೈರ್ಸ್ ಘಟಕ ಸ್ಥಗಿತ
ದೇಶಕ್ಕೆ ಆರ್ಥಿಕ ಸಂಕಷ್ಟದ ಸಮಯ:ಚಿದಂಬರಂ
ತೈಲ ದರ : ಪ್ರತಿ ಬ್ಯಾರೆಲ್‌ಗೆ 36.26ಡಾಲರ್‌