ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸಾನ್ಯೋ ಖರೀದಿಗೆ ಪ್ಯಾನಸೋನಿಕ್ ಆಸಕ್ತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಾನ್ಯೋ ಖರೀದಿಗೆ ಪ್ಯಾನಸೋನಿಕ್ ಆಸಕ್ತಿ
ಪ್ಯಾನಸೋನಿಕ್ ಕಂಪೆನಿ, ಜಪಾನ್‌ನ ಪ್ರತಿಸ್ಪರ್ಧಿ ಸಾನ್ಯೋ ಕಂಪೆನಿಯನ್ನು ಸಾರ್ವಜನಿಕ ಟೆಂಡರ್‌ ಮೂಲಕ 9 ಬಿಲಿಯನ್ ಡಾಲರ್‌ಗಳಿಗೆ ಖರೀದಿಸಲು ನಿರ್ಧರಿಸಿದ್ದು, ಶೇರುದಾರರು ಖರೀದಿಗೆ ಸಮ್ಮತಿಸಿದ್ದಾರೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಪ್ಯಾನಸೋನಿಕ್ ಕಂಪೆನಿ, ಜಪಾನ್‌ನ ಪ್ರತಿಸ್ಪರ್ಧಿ ಸಾನ್ಯೋ ಕಂಪೆನಿಯನ್ನು ಖರೀದಿಸುವುದರಿಂದ ಜಗತ್ತಿನ ಬೃಹತ್ ಎಲೆಕ್ಟ್ರಾನಿಕ್ಸ್ ಕಂಪೆನಿಗಳು ವೀಲಿನವಾದಂತಾಗಲಿದ್ದು, ಗ್ರೀನ್ ಎನರ್ಜಿ ಸೋಲಾರ್ ಪಾನೆಲ್ಸ್ ಹಾಗೂ ರಿಚಾರ್ಜೇಬಲ್ ಬ್ಯಾಟರಿಗಳ ಉದ್ಯಮದಲ್ಲಿ ಮತ್ತಷ್ಟು ಚೇತರಿಕೆಯಾಗಲಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ವೈರಾ ಟಿ.ವಿ.ಸೆಟ್‌ಗಳು ಹಾಗೂ ಡಿಜಿಟಲ್ ಬ್ಲೂ ರೇ ಡಿಸ್ಕ್‌ ಪ್ಲೇಯರ್ಸ್‌ಗಳನ್ನು ತಯಾರಿಸುವ ಪ್ಯಾನಸೋನಿಕ್, ಸಾನ್ಯೋ ಕಂಪೆನಿಯನ್ನು ಖರೀದಿಸುವ ಆಸಕ್ತಿಯನ್ನು ತೋರಿಸಿತ್ತು. ಸಾನ್ಯೋ ಕೂಡಾ ವಹಿವಾಟಿನಲ್ಲಿ ಕುಸಿತ ಕಂಡಿದ್ದರಿಂದ ವೀಲಿನಗೊಳ್ಳಲು ಸಮ್ಮತಿಸಿತ್ತು.

ಪ್ಯಾನಸೋನಿಕ್ ಕಂಪೆನಿ ಸಾನ್ಯೋ ಕಂಪೆನಿಯನ್ನು ಪ್ರತಿ ಶೇರಿಗೆ1.47 ಡಾಲರ್‌ಗಳ ದರದಂತೆ 9 ಬಿಲಿಯನ್ ಡಾಲರ್‌ಗಳಿಗೆ ಖರೀದಿಸಲು ನಿರ್ಧರಿಸಿರುವುದು ಸೂಕ್ತವಾಗಿದೆ ಎಂದು ಟೋಕಿಯೊದ ಒಕಸಾನ್ ಸೆಕ್ಯೂರಿಟೀಸ್ ಕಂಪೆನಿಯ ತಜ್ಞ ಕಝುಮಾಸಾ ಕುಬೊಟಾ ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಮೆರಿಕ: ವಾಹನೋದ್ಯಮಕ್ಕೆ 17.4 ಬಿ. ಡಾಲರ್ ಪ್ಯಾಕೇಜ್‌
ಜಿಂಬಾಬ್ವೆ:10 ಬಿಲಿಯನ್ ಡಾಲರ್ ನೋಟು ಬಿಡುಗಡೆ
ಗೃಹ ಸಾಲ ಬಡ್ಡಿದರದಲ್ಲಿ ಶೇ.0.5ರಷ್ಟು ಕಡಿತ
ತೈಲ ದರ ಕಡಿತಕ್ಕೆ ರಾಜಕೀಯ ಪಕ್ಷಗಳ ಒತ್ತಡ
ಬ್ಲ್ಯಾಕ್ ಬೆರ್ರಿ: ತ್ರೈಮಾಸಿಕ ಆದಾಯದಲ್ಲಿ ಹೆಚ್ಚಳ
ಐಸಿಐಸಿಐ ಸಿಇಒ ಸ್ಥಾನಕ್ಕೆ ಕೊಚರ್ ನೇಮಕ