ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್ಥಿಕ ಕ್ಷೋಭೆ: ಡಿ.2007ರಿಂದ 21 ಲಕ್ಷ ಉದ್ಯೋಗ ಕಡಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕ ಕ್ಷೋಭೆ: ಡಿ.2007ರಿಂದ 21 ಲಕ್ಷ ಉದ್ಯೋಗ ಕಡಿತ
ಕಳೆದ ಡಿಸೆಂಬರ್‌ನಲ್ಲಿ ವಿಶ್ವದ ಅತ್ಯಂತ ದೊಡ್ಡ ಆರ್ಥಿಕಶಕ್ತಿಯಾದ ಅಮೆರಿಕ ಆರ್ಥಿಕ ಹಿಂಜರಿತದ ಹಂತಕ್ಕೆ ಪ್ರವೇಶಿಸಿದ ಬಳಿಕ ಸುಮಾರು 21 ಲಕ್ಷ ಜನರು ಉದ್ಯೋಗರಹಿತರಾಗಿದ್ದಾರೆ.

ಅನೇಕ ಮಂದಿ ಮಾಲೀಕರು ಸಾಮ‌ೂಹಿಕ ಲೇಆಫ್ ಕ್ರಮಗಳನ್ನು ಕೈಗೊಳ್ಳುತ್ತಿದ್ದು, 50ಕ್ಕಿಂತ ಹೆಚ್ಚು ನೌಕರರಿಗೆ ಪಿಂಕ್ ಸ್ಲಿಪ್ ನೀಡಿದ ಪ್ರಕರಣಗಳು ಕಳೆದ 11 ತಿಂಗಳಲ್ಲಿ 20,712 ತಲುಪಿದೆ. ಕಾರ್ಮಿಕ ಅಂಕಿಅಂಶಗಳ ಬ್ಯೂರೊ ತನ್ನ ಹೇಳಿಕೆಯಲ್ಲಿ, ಒಟ್ಟು ಸಾಮ‌ೂಹಿಕ ಲೇಆಫ್ ಘಟನೆಗಳು 20,712ರಷ್ಟಾಗಿದ್ದು, ಉದ್ಯೋಗರಹಿತರ ಸಂಖ್ಯೆ 21,08, 743 ಮುಟ್ಟಿದೆಯೆಂದು ತಿಳಿಸಿದೆ. ಏತನ್ಮಧ್ಯೆ, ಅಮೆರಿಕ ಅಧಿಕೃತವಾಗಿ 2007 ಡಿಸೆಂಬರ್‌ನಲ್ಲಿ ಹಿಂಜರಿತಕ್ಕೆ ತಲುಪಿದೆ ಎಂದು ರಾಷ್ಟ್ರೀಯ ಆರ್ಥಿಕ ಸಂಶೋಧನೆ ಬ್ಯೂರೊ ತಿಳಿಸಿದೆ.

ಆರ್ಥಿಕ ಕ್ಷೋಭೆ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಕಂಪೆನಿಗಳು ವಿಶ್ವಾದ್ಯಂತ ವೆಚ್ಚ ತಗ್ಗಿಸುವುದಕ್ಕಾಗಿ ಉದ್ಯೋಗಗಳನ್ನು ಕಡಿತ ಮಾಡುತ್ತಿವೆ. ಡಿಸೆಂಬರ್ ತಿಂಗಳೊಂದರಲ್ಲೇ 1.20 ಲಕ್ಷ ಉದ್ಯೋಗ ಕಡಿತಗಳನ್ನು ಕಂಪೆನಿಗಳು ಪ್ರಕಟಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸಾನ್ಯೋ ಖರೀದಿಗೆ ಪ್ಯಾನಸೋನಿಕ್ ಆಸಕ್ತಿ
ವಾಹನೋದ್ಯಮಕ್ಕೆ 17.4 ಬಿ. ಡಾಲರ್ ಪ್ಯಾಕೇಜ್‌
ಜಿಂಬಾಬ್ವೆ:10 ಬಿಲಿಯನ್ ಡಾಲರ್ ನೋಟು ಬಿಡುಗಡೆ
ಗೃಹ ಸಾಲ ಬಡ್ಡಿದರದಲ್ಲಿ ಶೇ.0.5ರಷ್ಟು ಕಡಿತ
ತೈಲ ದರ ಕಡಿತಕ್ಕೆ ರಾಜಕೀಯ ಪಕ್ಷಗಳ ಒತ್ತಡ
ಬ್ಲ್ಯಾಕ್ ಬೆರ್ರಿ: ತ್ರೈಮಾಸಿಕ ಆದಾಯದಲ್ಲಿ ಹೆಚ್ಚಳ