ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ವಜ್ರ ಘಟಕಗಳ ಪುನಾರಂಭಕ್ಕೆ ಗುಜರಾತ್ ಸರ್ಕಾರ ಸೂಚನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಜ್ರ ಘಟಕಗಳ ಪುನಾರಂಭಕ್ಕೆ ಗುಜರಾತ್ ಸರ್ಕಾರ ಸೂಚನೆ
ಸುಮಾರು 2 ತಿಂಗಳಿಂದ ಕೆಲಸವಿಲ್ಲದೇ ವಜ್ರದ್ಯೋಮ ಕಾರ್ಮಿಕರ ಸಂಕಷ್ಟದ ಬಗ್ಗೆ ಕಳವಳಕ್ಕೆ ಈಡಾಗಿರುವ ಗುಜರಾತ್ ಸರ್ಕಾರ, ಶನಿವಾರ ವಜ್ರ ಮೆರುಗು ಉದ್ಯಮದ ಪ್ರತಿನಿಧಿಗಳಿಗೆ ತಮ್ಮ ಘಟಕಗಳನ್ನು ಸೋಮವಾರ ಪುನಾರಂಭಿಸುವಂತೆ ಸೂಚಿಸಿದೆ.

ರಾಜ್ಯ ಕಾರ್ಮಿಕ ಆಯುಕ್ತ ವತ್ಸಲ ವಾಸುದೇವ್ ಇತರೆ ಅಧಿಕಾರಿಗಳೊಂದಿಗೆ ಸೂರತ್ ವಜ್ರ ಒಕ್ಕೂಟದ ಅಧಿಕಾರಿಗಳನ್ನು, ವಜ್ರ ಕಾರ್ಮಿಕರ ಸಂಘಟನೆಯನ್ನು ಮತ್ತು ಕೈಗಾರಿಕೆ ಮುಖಂಡರನ್ನು ಭೇಟಿ ಮಾಡಿ ಸೋಮವಾರ ಎಲ್ಲ ಕಾರ್ಖಾನೆಗಳನ್ನು ತೆರೆಯುವಂತೆ ಆಗ್ರಹಿಸಿದರು. ಸೂರತ್‌ನ ಶೇ.50ರಷ್ಟು ಕಾರ್ಖಾನೆಗಳು ಇನ್ನೂ ಮುಚ್ಚಿದ್ದು, ಕಾರ್ಮಿಕರಿಗೆ ಕೆಲಸವಿಲ್ಲದೇ ಕಾರ್ಖಾನೆ ಪುನಾರಂಭಕ್ಕೆ ಕಾಯುತ್ತಿದ್ದಾರೆಂದು ಅವರು ನುಡಿದರು.

ವಜ್ರದ್ಯೋಮದ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸರ್ಕಾರ ಮಧ್ಯಸ್ಥಿಕೆ ವಹಿಸಲು ನಿರ್ಧರಿಸಿದೆ. ಗುಜರಾತಿನ ವಜ್ರೋದ್ಯಮ ಸುಮಾರು 10 ಲಕ್ಷ ಜನರಿಗೆ ಕೆಲಸ ಒದಗಿಸಿದ್ದು, ಜಾಗತಿಕ ಹಿಂಜರಿತದಿಂದಾಗಿ ಕೈಗಾರಿಕೆಸಂಪೂರ್ಣ ರಫ್ತು ಆಧಾರಿತವಾದ್ದರಿಂದ ತೀವ್ರ ಬಿಕ್ಕಟ್ಟು ಎದುರಿಸುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಆರ್ಥಿಕ ಕ್ಷೋಭೆ: ಡಿ.2007ರಿಂದ 21 ಲಕ್ಷ ಉದ್ಯೋಗ ಕಡಿತ
ಸಾನ್ಯೋ ಖರೀದಿಗೆ ಪ್ಯಾನಸೋನಿಕ್ ಆಸಕ್ತಿ
ವಾಹನೋದ್ಯಮಕ್ಕೆ 17.4 ಬಿ. ಡಾಲರ್ ಪ್ಯಾಕೇಜ್‌
ಜಿಂಬಾಬ್ವೆ:10 ಬಿಲಿಯನ್ ಡಾಲರ್ ನೋಟು ಬಿಡುಗಡೆ
ಗೃಹ ಸಾಲ ಬಡ್ಡಿದರದಲ್ಲಿ ಶೇ.0.5ರಷ್ಟು ಕಡಿತ
ತೈಲ ದರ ಕಡಿತಕ್ಕೆ ರಾಜಕೀಯ ಪಕ್ಷಗಳ ಒತ್ತಡ