ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ತಾಜ್ ಟವರ್, ಒಬೆರಾಯ್ ಟ್ರೈಡೆಂಟ್ ಪುನಾರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಾಜ್ ಟವರ್, ಒಬೆರಾಯ್ ಟ್ರೈಡೆಂಟ್ ಪುನಾರಂಭ
ನ.26ರ ಭಯೋತ್ಪಾದಕರ ಅಟಾಟೋಪಕ್ಕೆ ಕುಗ್ಗದೇ, ನಲುಗದೇ ನಿಂತಿರುವ, ಧ್ವನಿರಹಿತ ಪ್ರೇಕ್ಷಕರಾದ ತಾಜ್ ಟವರ್ ಮತ್ತು ಟ್ರೈಡೆಂಡ್ ಹೊಟೆಲ್, ನಾವು ಪುನಃ ಎದ್ದುನಿಂತಿದ್ದೇವೆಂದು ಜಗತ್ತಿಗೆ ಸಾರಿಹೇಳಿವೆ. ಭಯೋತ್ಪಾದನೆ ದಾಳಿಗಳು ನಡೆದು 25 ದಿನಗಳ ಬಳಿಕ ಅತಿಥಿಗಳಿಗೆ ಸುಸ್ವಾಗತ ಹೇಳಲು ಸಜ್ಜಾಗಿವೆ.

ಭಾನುವಾರ ರಾತ್ರಿ 7ಗಂಟೆಗೆ ತಾಜ್ ಹೊಟೆಲ್‌ನ 21 ಮಹಡಿಗಳ ಟವರ್ ಅತಿಥಿಗಳಿಗೆ ಮುಕ್ತವಾಗಿ ಬಾಗಿಲು ತೆರೆಯಲಿದೆ. ತಾಜ್‌ನ ಹೆರಿಟೇಜ್ ವಿಂಗ್ ಪುನಾರಂಭಕ್ಕೆ ಇನ್ನೂ 3 ತಿಂಗಳು ಹಿಡಿಯಲಿದ್ದು, ಭಯೋತ್ಪಾದನೆ ದಾಳಿಯಿಂದ ಅದರ ಒಳಂಗಾಣ ಪೂರ್ತಿ ಬಹುತೇಕ ಸುಟ್ಟುಹೋಗಿದೆ. ಟವರ್ ವಿಂಗ್‌ನ ಸುಮಾರು 270 ಕೋಣೆಗಳು, 9 ಸೂಟ್‌ಗಳು ಮತ್ತು 26 ಕ್ಲಬ್ ರೂಂಗಳು ಅತಿಥಿಗಳಿಗೆ ಲಭ್ಯವಾಗಲಿವೆ.

35 ಮಹಡಿಗಳ, 550 ಕೋಣೆಗಳ ಟ್ರೈಡೆಂಟ್ ಹೊಟೆಲ್ ಕೂಡ ಭಾನುವಾರ ತೆರೆಯಲಿದ್ದು, ಶಸ್ತ್ರಸಜ್ಜಿತ ಬಂದೂಕುಧಾರಿಗಳು ಎಡಬಿಡದೇ ಗುಂಡುಹಾರಿಸಿದ ಸಂದರ್ಭದಲ್ಲಿ ಹೊಟೆಲ್‌ನಲ್ಲಿದ್ದ ಕೆಲವು ಅತಿಥಿಗಳು ಪ್ರಾರ್ಥನೆಯಲ್ಲಿ ಭಾಗವಹಿಸಲಿದ್ದಾರೆಂದು ಮಾಧ್ಯಮವನ್ನು ಉದ್ದೇಶಿಸಿ ಟ್ರೈಡೆಂಟ್ ಅಧ್ಯಕ್ಷ ರತನ್ ಕೇಸ್ವಾನಿ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಜ್ರ ಘಟಕಗಳ ಪುನಾರಂಭಕ್ಕೆ ಗುಜರಾತ್ ಸರ್ಕಾರ ಸೂಚನೆ
ಆರ್ಥಿಕ ಕ್ಷೋಭೆ: ಡಿ.2007ರಿಂದ 21 ಲಕ್ಷ ಉದ್ಯೋಗ ಕಡಿತ
ಸಾನ್ಯೋ ಖರೀದಿಗೆ ಪ್ಯಾನಸೋನಿಕ್ ಆಸಕ್ತಿ
ವಾಹನೋದ್ಯಮಕ್ಕೆ 17.4 ಬಿ. ಡಾಲರ್ ಪ್ಯಾಕೇಜ್‌
ಜಿಂಬಾಬ್ವೆ:10 ಬಿಲಿಯನ್ ಡಾಲರ್ ನೋಟು ಬಿಡುಗಡೆ
ಗೃಹ ಸಾಲ ಬಡ್ಡಿದರದಲ್ಲಿ ಶೇ.0.5ರಷ್ಟು ಕಡಿತ