ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ರೈಲ್ವೆ ಭದ್ರತಾ ಸಿಬ್ಬಂದಿಗೆ 3000 ಎಕೆ-47 ರೈಫಲ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈಲ್ವೆ ಭದ್ರತಾ ಸಿಬ್ಬಂದಿಗೆ 3000 ಎಕೆ-47 ರೈಫಲ್
ರೈಲುಗಳು ಮತ್ತು ರೈಲ್ವೆ ನಿಲ್ದಾಣಗಳು ಭಯೋತ್ಪಾದಕರಿಗೆ ಸುಲಭದ ತುತ್ತಾಗುತ್ತಿರುವ ಹಿನ್ನೆಲೆಯಲ್ಲಿ ಭಯೋತ್ಪಾದನೆ ದಾಳಿಗಳನ್ನು ಸಮರ್ಥವಾಗಿ ತಡೆಯಲು ರೈಲ್ವೆಯ ಭದ್ರತಾ ಸಿಬ್ಬಂದಿಗೆ 3000 ಎಕೆ-47 ರೈಫಲ್ಲುಗಳನ್ನು ಖರೀದಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ಗೃಹಸಚಿವಾಲಯದ ಜತೆ ನಡೆದ ಸಭೆಯಲ್ಲಿ ರೈಲ್ವೆ ರಕ್ಷಣಾ ಪಡೆಗೆ ಎಕೆ-47 ರೈಫಲ್ಲುಗಳ ಖರೀದಿಗೆ ನಿರ್ಧರಿಸಲಾಯಿತೆಂದು ರೈಲ್ವೆ ಸಚಿವಾಲಯದ ಅಧಿಕಾರಿ ತಿಳಿಸಿದರು. ಆರ್‌ಪಿಎಫ್ ಬಳಕೆ ಸಲುವಾಗಿ ಆಧುನಿಕ ಭದ್ರತಾ ಸಂಬಂಧಿತ ಉಪಕರಣ ಖರೀದಿಗೆ ರೈಲ್ವೆ ಸಚಿವಾಲಯವು 60.76 ಕೋಟಿ ರೂ. ಮೀಸಲಿರಿಸಿದೆ. ಎಕೆ-47 ಬಂದೂಕುಗಳಲ್ಲದೇ ರೈಲ್ವೆಯು ಇನ್ಸಾಸ್ 5.56 ಎಂಎಂ ರೈಫಲ್, ಎಸ್‌ಎಲ್ಆರ್ 7.62 ಎಂ.ಎಂ. ಕಾರ್ಬೈನ್ ಎಂಎಂ ಮತ್ತು ಆಟೊ ಎಂಎಂ ಪಿಸ್ತೂಲು ಖರೀದಿಸಲಿದೆ.

ಆರ್‌ಪಿಎಫ್ ಸಿಬ್ಬಂದಿಗೆ ಬಹಾದುರ್‌ಗಢ್‌ನಲ್ಲಿ ತರಬೇತಿ ಚಟುವಟಿಕೆ ಸಹ ನಡೆಸಲಾಗುತ್ತಿದೆ. ತರಬೇತಿ ಮಾದರಿಯನ್ನು ಬದಲಾದ ಭದ್ರತಾ ಸನ್ನಿವೇಶವನ್ನು ಮನಸ್ಸಿನಲ್ಲಿಟ್ಟುಕೊಂಡು ರೂಪಿಸಲಾಗಿದೆ ಎಂದು ಅಧಿಕಾರಿ ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತಾಜ್ ಟವರ್, ಒಬೆರಾಯ್ ಟ್ರೈಡೆಂಟ್ ಪುನಾರಂಭ
ವಜ್ರ ಘಟಕಗಳ ಪುನಾರಂಭಕ್ಕೆ ಗುಜರಾತ್ ಸರ್ಕಾರ ಸೂಚನೆ
ಆರ್ಥಿಕ ಕ್ಷೋಭೆ: ಡಿ.2007ರಿಂದ 21 ಲಕ್ಷ ಉದ್ಯೋಗ ಕಡಿತ
ಸಾನ್ಯೋ ಖರೀದಿಗೆ ಪ್ಯಾನಸೋನಿಕ್ ಆಸಕ್ತಿ
ವಾಹನೋದ್ಯಮಕ್ಕೆ 17.4 ಬಿ. ಡಾಲರ್ ಪ್ಯಾಕೇಜ್‌
ಜಿಂಬಾಬ್ವೆ:10 ಬಿಲಿಯನ್ ಡಾಲರ್ ನೋಟು ಬಿಡುಗಡೆ