ಜಾಗತಿಕ ಹಣಕಾಸು ಬಿಕ್ಕಟ್ಟಿನಿಂದಾಗಿ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿಯೂ ಹಿನ್ನಡೆಯಾಗಿದ್ದರಿಂದ ಸಿಮೆಂಟ್ ರಫ್ತು ಮೇಲಿನ ನಿಷೇಧವನ್ನು ಸರಕಾರ ಹಿಂತೆಗೆದುಕೊಂಡಿದೆ.
ತತ್‌ಕ್ಷಣದಿಂದ ಜಾರಿಗೆ ಬರುವಂತೆ, ಸಿಮೆಂಟ್ ಮೇಲಿನ ರಫ್ತು ನಿರ್ಬಂಧವನ್ನು ತೆರವುಗೊಳಿಸಲಾಗಿದೆ ಎಂದು ವಾಣಿಜ್ಯ ಸಚಿವಾಲಯದ ಅಧೀನದಲ್ಲಿರುವ ವಿದೇಶ ವಹಿವಾಟು ವಿಭಾಗದ ಮಹಾ ನಿರ್ದೇಶಕರು ವಾರಾಂತ್ಯದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ಥಳೀಯ ಪೂರೈಕೆ ಹೆಚ್ಚಿಸುವ ಮತ್ತು ಏರಿದ ಬೆಲೆಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಸರಕಾರವು ಕಳೆದ ಮೇ ತಿಂಗಳಲ್ಲಿ ಸಿಮೆಂಟ್ ರಫ್ತಿನ ಮೇಲೆ ನಿಷೇಧ ವಿಧಿಸಿತ್ತು.
ಕಳೆದ ಕೆಲವು ತಿಂಗಳಲ್ಲಿ, ಹೆಚ್ಚಿನ ಬಡ್ಡಿದರಗಳು ಹಾಗೂ ಜಾಗತಿಕ ಹಣಕಾಸು ಬಿಕ್ಕಟ್ಟಿನಿಂದ ಬಹುತೇಕ ಕಂಪನಿಗಳು ತಮ್ಮ ವಿಸ್ತರಣಾ ಯೋಜನೆಗಳನ್ನು ಮುಂದೂಡಿದ ಹಿನ್ನೆಲೆಯಲ್ಲಿ ಬೇಡಿಕೆ ಕುಸಿತ ಕಂಡಿತ್ತು. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿನ ಚಟುವಟಿಕೆಗಳು ಕುಂಠಿತವಾಗಿದ್ದವು. |