ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಚುನಾವಣೆಗೆ ಸ್ವಲ್ಪ ಮೊದಲು ತೈಲ ದರ ಇಳಿಕೆ ಸಾಧ್ಯತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚುನಾವಣೆಗೆ ಸ್ವಲ್ಪ ಮೊದಲು ತೈಲ ದರ ಇಳಿಕೆ ಸಾಧ್ಯತೆ
ಫೆಬ್ರವರಿ ತಿಂಗಳಲ್ಲಿ ಮಹಾ ಚುನಾವಣೆಗಳು ಘೋಷಣೆಯಾಗುವ ಕೆಲವೇ ದಿನ ಮೊದಲು ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಮತ್ತಷ್ಟು ಕಡಿತ ಪ್ರಕಟಿಸಿ ಘೋಷಣೆ ಹೊರಡಿಸಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ನನ್ನ ಪ್ರಕಾರ, ಸರಕಾರವು ಮತ್ತೊಂದು ಸುತ್ತಿನ ಇಂಧನ ಬೆಲೆ ಇಳಿಕೆ ತೀರ್ಮಾನ ಕೈಗೊಳ್ಳುವುದಕ್ಕೆ ಫೆಬ್ರವರಿ ತಿಂಗಳವರೆಗೆ ಕಾಯಲಿದೆ" ಎಂದು ಪೆಟ್ರೋಲಿಯಂ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಕೇಂದ್ರವು ಪೆಟ್ರೋಲ್ ಬೆಲೆಯನ್ನು ಲೀಟರಿಗೆ 5 ರೂ. ಹಾಗೂ ಡೀಸೆಲ್ ಬೆಲೆಯನ್ನು ಲೀಟರಿಗೆ 2 ರೂ. ಇಳಿಕೆ ಮಾಡಿತ್ತು. ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆಯು ಬ್ಯಾರೆಲ್‌ಗೆ 147 ಡಾಲರ್ ಇದ್ದದ್ದು, ಕೇವಲ 45 ಡಾಲರಿಗೆ ಇಳಿಕೆಯಾದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತಾದರೂ, ಬೆಲೆ ಇಳಿಕೆ ಮಾಡಿದ್ದು ತೀರಾ ಕಡಿಮೆಯಾಯಿತು ಎಂಬ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದಿದ್ದವು.

ಫೆಬ್ರವರಿ ವರೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲಬೆಲೆಯ ಗತಿ ಹೇಗಿರುತ್ತದೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಈಗಲೇ ಬೆಲೆ ಇಳಿಸಿ, ಆ ಬಳಿಕ ಚುನಾವಣೆಗಳು ಸಮೀಪಿಸುತ್ತಿರುವಂತೆಯೇ ಬೆಲೆ ಏರಿಸುವುದು ಸಮಂಜಸವಾಗದು ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ.

ಈ ತಿಂಗಳಲ್ಲಿ ಬೆಲೆ ಇಳಿಕೆ ಮಾಡಿದ ಹೊರತಾಗಿಯೂ, ಸರಕಾರಿ ಸ್ವಾಮ್ಯದ ತೈಲ ವಿತರಣಾ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲಿನಲ್ಲಿ 9.98 ರೂ. ಹಾಗೂ ಪ್ರತಿ ಲೀಟರ್ ಡೀಸೆಲ್‌ನಲ್ಲಿ 1.03 ರೂ.ನಷ್ಟು ಲಾಭ ಸಂಗ್ರಹಿಸುತ್ತಿದ್ದವು. ಇದೀಗ ಜಾಗತಿಕ ತೈಲ ಬೆಲೆ ಮತ್ತಷ್ಟು ಇಳಿಕೆಯಾಗಿರುವುದರಿಂದ ಈ ಲಾಭದ ಪ್ರಮಾಣ ಅನುಕ್ರಮವಾಗಿ 11.48 ರೂ. ಹಾಗೂ 2.92 ರೂ.ಗೆ ಏರಿತ್ತು ಎಂದು ಈ ಅಧಿಕಾರಿ ತಿಳಿಸಿದ್ದಾರೆ.

ಆದರೆ ಸೀಮೆ ಎಣ್ಣೆಯಲ್ಲಿ ಲೀಟರಿಗೆ 17.26 ರೂ. ಮತ್ತು ಅಡುಗೆ ಅನಿಲ ಸಿಲಿಂಡರ್ ಒಂದರಲ್ಲಿ 148.38 ರೂ. ನಷ್ಟವನ್ನು ಈ ತೈಲ ಕಂಪನಿಗಳು ಈಗಲೂ ಅನುಭವಿಸುತ್ತಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹಣಕಾಸು ಬಿಕ್ಕಟ್ಟು: ಹುಂಡೈ ಕಾರ್ಖಾನೆಯಲ್ಲಿ ದುಡಿತ ಕಡಿತ
ಸಿಮೆಂಟ್ ರಫ್ತು ಮೇಲಿನ ನಿರ್ಬಂಧ ಹಿಂತೆಗೆತ
ಮಧ್ಯಮವರ್ಗದವರಿಗೆ ಮನೆ ಕೊಳ್ಳುವ ಕಾಲ
ಸಾಗರದಾಳದಲ್ಲಿ ಕೇಬಲ್ ಕಟ್: ನೆಟ್, ಸಂವಹನಕ್ಕೆ ತೊಡಕು
ಅಲ್ಪ ಸಂಖ್ಯೆಯಲ್ಲಿ ನ್ಯಾನೋ ಕಾರುಗಳು ಮಾರುಕಟ್ಟೆಗೆ
ರೈಲ್ವೆ ಭದ್ರತಾ ಸಿಬ್ಬಂದಿಗೆ 3000 ಎಕೆ-47 ರೈಫಲ್