ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹೊಸ ವರ್ಷಕ್ಕೆ ಸಾಲ ಬಡ್ಡಿ ದರ ಕಡಿತದ ಉಡುಗೊರೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊಸ ವರ್ಷಕ್ಕೆ ಸಾಲ ಬಡ್ಡಿ ದರ ಕಡಿತದ ಉಡುಗೊರೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶನಿವಾರ 75 ಬೇಸಿಸ್ ಪಾಯಿಂಟ್ ಬಡ್ಡಿ ದರ ಕಡಿತ ಘೋಷಿಸಿರುವುದು ದೇಶದಲ್ಲಿ ಸಾಲದ ಬಡ್ಡಿದರ ಮತ್ತಷ್ಟು ಇಳಿಕೆಗೆ ವೇದಿಕೆಯೊದಗಿಸಿಕೊಟ್ಟಿದ್ದು, ಬ್ಯಾಂಕ್ ಆಫ್ ಬರೋಡಾ ಮತ್ತು ಬ್ಯಾಂಕ್ ಆಫ್ ಇಂಡಿಯಾ ಕೂಡ ಎಸ್‌ಬಿಐಯನ್ನು ಹಿಂಬಾಲಿಸಿದೆ.

ಬ್ಯಾಂಕ್ ಆಫ್ ಬರೋಡಾ ಮತ್ತು ಬ್ಯಾಂಕ್ ಆಫ್ ಇಂಡಿಯಾಗಳು ತಮ್ಮ ಪ್ರಧಾನ ಸಾಲ ಬಡ್ಡಿ ದರಗಳನ್ನು ಕೂಡ 75 ಬೇಸಿಸ್ ಪಾಯಿಂಟ್‌ನಷ್ಟು ಇಳಿಸಿ ಶೇ.12.5ಕ್ಕೆ ತಂದಿವೆ. ಇದು 2009ರ ಜನವರಿ 1ರಿಂದ ಜಾರಿಗೆ ಬರಲಿದೆ. ಇದರ ನಡುವೆ ಇತರ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳು ಕೂಡ ಬಡ್ಡಿ ದರ ಕಡಿತಗೊಳಿಸುವುದಾಗಿ ಹೇಳಿವೆ.

ಎರಡೂ ಬ್ಯಾಂಕುಗಳು ಠೇವಣಿ ಬಡ್ಡಿ ದರವನ್ನೂ ಶೇ.0.5ರಿಂದ ಶೇ.1ರಷ್ಟು ಕಡಿತಗೊಳಿಸಿವೆ. ಬಡ್ಡಿದರ ಏರಿಕೆಯಿಂದಾಗಿ ಸಾಲದ ಬೇಡಿಕೆ ತೀವ್ರವಾಗಿ ಕುಸಿದಿರುವುದು ಮತ್ತು ಇದರೊಂದಿಗೆ ಜಾಗತಿಕವಾಗಿ ಹಣಕಾಸು ಹಿನ್ನಡೆಯೂ ಆಗಿರುವ ಹಿನ್ನೆಲೆಯಲ್ಲಿ ಬ್ಯಾಂಕುಗಳು ತಮ್ಮ ಸಾಲ ಬಡ್ಡಿ ದರ ಹಾಗೂ ಠೇವಣಿ ಬಡ್ಡಿದರಗಳನ್ನು ಕಡಿಮೆ ಮಾಡುತ್ತಿವೆ.

ಡಿಸೆಂಬರ್ 5ರಂದು ಕೊನೆಗೊಂಡ ಪಕ್ಷದಲ್ಲಿ ಬ್ಯಾಂಕುಗಳಲ್ಲಿರುವ ಠೇವಣಿಗಳ ಮೊತ್ತವು 35,294 ಕೋಟಿ ರೂ.ಗಳಿಗೆ ಏರಿದ್ದರೆ, ಒಟ್ಟು ಸಾಲ ವಿತರಣೆಯು ಕೇವಲ 9.409 ಕೋಟಿ ರೂ. ಏರಿತ್ತು. ಅಂದಿನಿಂದ ಪರಿಸ್ಥಿತಿ ಮತ್ತಷ್ಟು ಹಿನ್ನಡೆ ಕಂಡಿದೆ ಎಂದು ಸಾರ್ವಜನಿಕ ವಲಯದ ಬ್ಯಾಂಕ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಕ್ಟೋಬರ್ ತಿಂಗಳಲ್ಲಿ ಸಾಲದ ರೆಪೋ ದರವನ್ನು ಆರ್‌ಬಿಐ ಶೇ.5.5 ರಿಂದ ಶೇ.3.5ಕ್ಕೆ ಇಳಿಸಿದ್ದು, ಬ್ಯಾಂಕುಗಳಿಗೆ ಸಾಲ ನೀಡುವುದಕ್ಕಾಗಿ ಅದು 1,40,00 ಕೋಟಿ ರೂ.ಗಳ ಹೆಚ್ಚುವರಿ ನಿಧಿಯನ್ನು ಬಿಡುಗಡೆ ಮಾಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚುನಾವಣೆಗೆ ಸ್ವಲ್ಪ ಮೊದಲು ತೈಲ ದರ ಇಳಿಕೆ ಸಾಧ್ಯತೆ
ಹಣಕಾಸು ಬಿಕ್ಕಟ್ಟು: ಹುಂಡೈ ಕಾರ್ಖಾನೆಯಲ್ಲಿ ದುಡಿತ ಕಡಿತ
ಸಿಮೆಂಟ್ ರಫ್ತು ಮೇಲಿನ ನಿರ್ಬಂಧ ಹಿಂತೆಗೆತ
ಮಧ್ಯಮವರ್ಗದವರಿಗೆ ಮನೆ ಕೊಳ್ಳುವ ಕಾಲ
ಸಾಗರದಾಳದಲ್ಲಿ ಕೇಬಲ್ ಕಟ್: ನೆಟ್, ಸಂವಹನಕ್ಕೆ ತೊಡಕು
ಅಲ್ಪ ಸಂಖ್ಯೆಯಲ್ಲಿ ನ್ಯಾನೋ ಕಾರುಗಳು ಮಾರುಕಟ್ಟೆಗೆ