ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬ್ಯಾರೆಲ್‌ಗೆ 40 ಡಾಲರ್‌ಗಿಂತ ಕೆಳಕ್ಕಿಳಿದ ಕಚ್ಚಾ ತೈಲ ಬೆಲೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬ್ಯಾರೆಲ್‌ಗೆ 40 ಡಾಲರ್‌ಗಿಂತ ಕೆಳಕ್ಕಿಳಿದ ಕಚ್ಚಾ ತೈಲ ಬೆಲೆ
ಜಾಗತಿಕ ಕಚ್ಚಾ ತೈಲ ಬೆಲೆಯು ಮತ್ತಷ್ಟು ಕುಸಿತ ಕಂಡಿದ್ದು, ಜಾಗತಿಕ ಹಣಕಾಸು ಹಿನ್ನಡೆಯಿಂದಾಗಿ ವಿದ್ಯುತ್ ಬೇಡಿಕೆ ಕುಸಿಯುತ್ತಿದೆ ಎಂಬ ಆತಂಕದಲ್ಲಿ ಏಷ್ಯಾ ಮಾರುಕಟ್ಟೆಯಲ್ಲಿ ಅದು ಬ್ಯಾರೆಲ್ ಒಂದಕ್ಕೆ 40 ಡಾಲರ್‌ಗಳಷ್ಟು ಕೆಳಮಟ್ಟಕ್ಕೆ ಇಳಿದಿದೆ.

ಸಿಂಗಾಪುರದ ನ್ಯೂಯಾರ್ಕ್ ಮರ್ಕಂಟೈಲ್ ಎಕ್ಸ್‌ಚೇಂಜ್‌ನಲ್ಲಿ ಮಂಗಳವಾರ ಎಲೆಕ್ಟ್ರಾನಿಕ್ ಟ್ರೇಡಿಂಗ್ ಸಂದರ್ಭ ಫೆಬ್ರವರಿ ತಿಂಗಳ ವಿತರಣೆಗಾಗಿ ಇರುವ ಲೈಟ್, ಸ್ವೀಟ್ ಮತ್ತು ಕಚ್ಚಾ ತೈಲವು ಬ್ಯಾರೆಲ್ ಒಂದಕ್ಕೆ 64 ಸೆಂಟ್‌ಗಳಷ್ಟು ಕುಸಿದು, 39.27 ಡಾಲರ್‌ಗೆ ಇಳಿಯಿತು.

ಅಮೆರಿಕದಲ್ಲಿ ಭಾರೀ ಪ್ರಮಾಣದಲ್ಲಿ ಉದ್ಯೋಗ ಕಡಿತ ಮತ್ತು ಗ್ರಾಹಕ ವೆಚ್ಚದಲ್ಲಿಯೂ ಕುಸಿತವಾಗುವುದರಿಂದ ತೈಲದ ಬೇಡಿಕೆಯೂ ಕಡಿಮೆಯಾಗಲಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಜುಲೈ ತಿಂಗಳಿಂದೀಚೆಗೆ ಕಚ್ಚಾ ತೈಲ ಬೆಲೆಯು ಶೇ.73ರಷ್ಟು ಕುಸಿತ ಕಂಡಿತ್ತು. ಜನವರಿ ತಿಂಗಳ ಗುತ್ತಿಗೆಯು ಐದು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಅಂದರೆ ಬ್ಯಾರೆಲ್ ಒಂದಕ್ಕೆ 33.87 ಡಾಲರಿಗೆ ಇಳಿದಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಹೊಸ ವರ್ಷಕ್ಕೆ ಸಾಲ ಬಡ್ಡಿ ದರ ಕಡಿತದ ಉಡುಗೊರೆ
ಚುನಾವಣೆಗೆ ಸ್ವಲ್ಪ ಮೊದಲು ತೈಲ ದರ ಇಳಿಕೆ ಸಾಧ್ಯತೆ
ಹಣಕಾಸು ಬಿಕ್ಕಟ್ಟು: ಹುಂಡೈ ಕಾರ್ಖಾನೆಯಲ್ಲಿ ದುಡಿತ ಕಡಿತ
ಸಿಮೆಂಟ್ ರಫ್ತು ಮೇಲಿನ ನಿರ್ಬಂಧ ಹಿಂತೆಗೆತ
ಮಧ್ಯಮವರ್ಗದವರಿಗೆ ಮನೆ ಕೊಳ್ಳುವ ಕಾಲ
ಸಾಗರದಾಳದಲ್ಲಿ ಕೇಬಲ್ ಕಟ್: ನೆಟ್, ಸಂವಹನಕ್ಕೆ ತೊಡಕು