ತೈಲ ಬೆಲೆ ಇಳಿಕೆಯಿಂದ ಪ್ರಭಾವಿತಗೊಂಡ ಚಿನ್ನವು ಅಂತಾರಾಷ್ಟ್ರೀಯ ಸ್ತರದಲ್ಲಿ ತನ್ನ ಮೌಲ್ಯ ಕಳೆದುಕೊಂಡರೂ, ಸೋಮವಾರ ಭಾರತೀಯ ಚಿನ್ನದ ಮಾರುಕಟ್ಟೆಯು ರೂಪಾಯಿ ದುರ್ಬಲವಾಗಿದ್ದರಿಂದ, ಬೆಲೆ ಏರಿಸಿಕೊಂಡಿತು.
ಸೋಮವಾರ ಚಿನ್ನದ ಬೆಲೆಯು 10 ಗ್ರಾಂಗೆ 13 ಸಾವಿರ ರೂಪಾಯಿ ಆಗಿದ್ದು, ಇದು ಕಳೆದ ಅಂತ್ಯಕ್ಕಿಂತ 100 ರೂ. ಹೆಚ್ಚಳವಾಗಿದೆ.
ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ ಆಫ್ ಇಂಡಿಯಾದಲ್ಲಿ ಫೆಬ್ರವರಿ ತಿಂಗಳ ಮೀಸಲು ಚಿನ್ನವು ಮಂಗಳವಾರ 10 ಗ್ರಾಂಗೆ 12,910 ರೂಪಾಯಿಯಲ್ಲಿ ಆರಂಭ ಕಂಡಿತು. ಅದು ಸೋಮವಾರ ಗ್ರಾಂಗೆ 13,045 ರೂಪಾಯಿಗಳಲ್ಲಿ ಅಂತ್ಯವಾಗಿತ್ತು.
ಕಾಮೆಕ್ಸ್‌ನಲ್ಲಿ ಚಿನ್ನದ ಫೆಬ್ರವರಿ ತಿಂಗಳ ಗುತ್ತಿಗೆಯು ಔನ್ಸ್‌ಗೆ 830 ಡಾಲರ್ ಇರುವುದು ಈ ವಾರದ ಮಟ್ಟಿಗೆ ಬೆಂಬಲದಾಯಕವಾಗಿದೆ. ಅದು ಔನ್ಸ್‌ಗೆ 900 ಡಾಲರ್‌ವರೆಗೂ ಏರು ಪೇರಾಗುತ್ತಿರಬಹುದು ಎಂದು ಚಿನ್ನದ ವಹಿವಾಟುದಾರರು ಆಶಾವಾದ ವ್ಯಕ್ತಪಡಿಸಿದ್ದಾರೆ. |