ವಿಶ್ವಾದ್ಯಂತ ಸಿಟಿ ಸಮೂಹಕ್ಕೆ ಐಟಿ ಸೇವೆಗಳು ಮತ್ತು ಸೊಲ್ಯುಶನ್‌ಗಳನ್ನು ಪೂರೈಸುತ್ತಿರುವ ಸಿಟಿ ಟೆಕ್ನಾಲಜಿ ಸರ್ವಿಸಸ್ ಅನ್ನು 127 ದಶಲಕ್ಷ ಡಾಲರ್ ನಗದು ಮೊತ್ತಕ್ಕೆ ಖರೀದಿಸಲು ಸಿಟಿಗ್ರೂಪ್ ಜೊತೆ ಒಡಂಬಡಿಕೆಗೆ ಭಾರತದ 3ನೇ ಅತಿದೊಡ್ಡ ಸಾಫ್ಟ್‌ವೇರ್ ರಫ್ತು ಸಂಸ್ಥೆ ವಿಪ್ರೋ ಸಹಿ ಹಾಕಿದೆ.
ಬಿಎಸ್ಇಗೆ ವಿಪ್ರೋ ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಆರು ವರ್ಷಗಳ ಅವಧಿಯಲ್ಲಿ ಕನಿಷ್ಠ 500 ದಶಲಕ್ಷ ಡಾಲರ್ ಸೇವಾ ಕಂದಾಯ ರೂಪದಲ್ಲಿ ಪೂರೈಸಲು ಒಪ್ಪಿಕೊಳ್ಳಲಾಗಿದೆ. ತಂತ್ರಜ್ಞಾನ ಮೂಲಸೌಕರ್ಯ ಸೇವೆಗಳು ಮತ್ತು ಅಪ್ಲಿಕೇಶನ್ ಅಭಿವೃದ್ಧಿ ಹಾಗೂ ನಿರ್ವಹಣಾ ಸೇವೆಗಳ ಪೂರೈಕೆಗಾಗಿ ವಿಪ್ರೋ ಮತ್ತು ಸಿಟಿ ಬಳಗವು ಪ್ರಧಾನ ಸೇವಾ ಒಪ್ಪಂದಕ್ಕೆ ಶೀಘ್ರ ಸಹಿ ಹಾಕಲಿವೆ.
ಮುಂಬಯಿ ಮತ್ತು ಚೆನ್ನೈಯಲ್ಲಿ ಕಾರ್ಯಾಚರಿಸುತ್ತಿರುವ ಸಿಟಿ ಟೆಕ್ನಾಲಜಿ ಸರ್ವಿಸಸ್‌ನಲ್ಲಿ ಸುಮಾರು 1650 ಉದ್ಯೋಗಿಗಳಿದ್ದಾರೆ. ಮತ್ತು 2008 ವರ್ಷದ ವಹಿವಾಟು ಸುಮಾರು 80 ದಶಲಕ್ಷ ಡಾಲರ್ ಆಗಿರುವ ಸಾಧ್ಯತೆಗಳಿವೆ. ಈ ಒಪ್ಪಂದವು ಮಾರ್ಚ್ 2009 ಸಂದರ್ಭ ಪೂರ್ಣಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. |