ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 2ನೇ ಉತ್ತೇಜನಾ ಪ್ಯಾಕೇಜ್ ಇನ್ನೆರಡು ದಿನದಲ್ಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
2ನೇ ಉತ್ತೇಜನಾ ಪ್ಯಾಕೇಜ್ ಇನ್ನೆರಡು ದಿನದಲ್ಲಿ
ಜಾಗತಿಕ ಹಣಕಾಸು ಬಿಕ್ಕಟ್ಟಿನ ಬಿಸಿ ಅನುಭವಿಸುತ್ತಿರುವ ಭಾರತದಲ್ಲಿ ಆರ್ಥಿಕ ಸ್ಥಿತಿಗೆ ಚೈತನ್ಯ ತುಂಬುವ ನಿಟ್ಟಿನಲ್ಲಿ ಕೇಂದ್ರವು ಬಹುನಿರೀಕ್ಷಿತ ಎರಡನೇ ಉತ್ತೇಜಕ ಪ್ಯಾಕೇಜನ್ನು ಎರಡು-ಮೂರು ದಿನಗಳಲ್ಲೇ ಘೋಷಿಸಲಿದೆ.

"ಈ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ. ಇನ್ನೆರಡು ದಿನಗಳಲ್ಲಿ ಇದು ಕಾರ್ಯಗತವಾಗಬೇಕಿದೆ" ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಕಮಲ್ ನಾಥ್ ಸುದ್ದಿಗಾರರಿಗೆ ಮಂಗಳವಾರ ತಿಳಿಸಿದರು.

ಡಿಸೆಂಬರ್ 7ರಂದು ಘೋಷಿಸಿದ ಮೊದಲ ಉತ್ತೇಜನಾ ಪ್ಯಾಕೇಜಿನಲ್ಲಿ ಸರಕಾರವು, ಶೇ.4 ಅಬಕಾರಿ ಸುಂಕ ಕಡಿತ ಮತ್ತು 20 ಸಾವಿರ ಕೋಟಿ ರೂ.ಗಳ ಹೆಚ್ಚುವರಿ ಸಾರ್ವಜನಿಕ ವೆಚ್ಚ ಘೋಷಿಸಿತ್ತು.

ಎರಡನೇ ಆರ್ಥಿಕ ಸ್ಥಿತಿ ಉತ್ತೇಜನಾ ಪ್ಯಾಕೇಜ್ ಹೆಚ್ಚು ಮಹತ್ವ ಪಡೆದುಕೊಂಡಿದೆ. ಇದಕ್ಕೆ ಕಾರಣವೆಂದರೆ, ಕೈಗಾರಿಕಾ ಪ್ರಗತಿ ದರವು ಅಕ್ಟೋಬರ್ ತಿಂಗಳಲ್ಲಿ 15 ವರ್ಷಗಳ ಬಳಿಕ ಶೇ.0.4 ಕುಸಿದಿದ್ದು, ಇದೇ ಅವಧಿಯಲ್ಲಿ ರಫ್ತು ಪ್ರಮಾಣ ಕೂಡ ಶೇ.12.1ರಷ್ಟು ಹಿನ್ನಡೆ ಕಂಡಿದೆ.

ಹಣಕಾಸು ಉತ್ತೇಜನ ಮಾತ್ರವಲ್ಲದೆ, ರಿಸರ್ವ್ ಬ್ಯಾಂಕ್ ಕೂಡ ಹಲವಾರು ಉತ್ತೇಜಕ ಕ್ರಮಗಳ ಮೂಲಕ, ವಿತ್ತ ಸ್ಥಿತಿ ಸುಧಾರಣೆಗೆ ಪ್ರಯತ್ನಿಸಿತ್ತು. ಮಂಗಳವಾರ ಸಂಸತ್ತಿನಲ್ಲಿ ಮಂಡಿಸಲಾದ ಮಧ್ಯ ವಾರ್ಷಿಕ ಆರ್ಥಿಕ ಪರಿಶೀಲನಾ ವರದಿಯಲ್ಲಿ, ಈ ಹಣಕಾಸು ವರ್ಷಕ್ಕೆ ಶೇ.7ರ ಅಭಿವೃದ್ಧಿ ದರ ಅಂದಾಜು ಮಾಡಲಾಗಿದ್ದು, ಇದು ಹಿಂದಿನ ಹಣಕಾಸು ವರ್ಷಕ್ಕಿಂತ ಶೇ.2ರಷ್ಟು ಕಡಿಮೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತ್ಯಂಗೆ ವಿಶ್ವ ಬ್ಯಾಂಕ್ 8 ವರ್ಷ ನಿಷೇಧ
ವಿಪ್ರೋ: 127 ದಶಲಕ್ಷ ಡಾಲರ್‌ಗೆ ಸಿಟಿ ಟೆಕ್ನಾಲಜಿ ಖರೀದಿ
ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ
ಬ್ಯಾರೆಲ್‌ಗೆ 40 ಡಾಲರ್‌ಗಿಂತ ಕೆಳಕ್ಕಿಳಿದ ಕಚ್ಚಾ ತೈಲ ಬೆಲೆ
ಹೊಸ ವರ್ಷಕ್ಕೆ ಸಾಲ ಬಡ್ಡಿ ದರ ಕಡಿತದ ಉಡುಗೊರೆ
ಚುನಾವಣೆಗೆ ಸ್ವಲ್ಪ ಮೊದಲು ತೈಲ ದರ ಇಳಿಕೆ ಸಾಧ್ಯತೆ