ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಲಿಪ್‌ಸ್ಟಿಕ್ ಮಾರಾಟ ಹೆಚ್ಚಿಸಿದ ಆರ್ಥಿಕ ಹಿಂಜರಿತ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಿಪ್‌ಸ್ಟಿಕ್ ಮಾರಾಟ ಹೆಚ್ಚಿಸಿದ ಆರ್ಥಿಕ ಹಿಂಜರಿತ!
ಇತ್ತೀಚಿನ ಜಾಗತಿಕ ಹಣಕಾಸು ಬಿಕ್ಕಟ್ಟು 'ಲಿಪ್‌ಸ್ಟಿಕ್ ಎಫೆಕ್ಟ್' ಎಂದೇ ಪರಿಗಣಿಸಲಾಗಿರುವ ವಿಶಿಷ್ಟ ಪರಿಣಾಮವೊಂದನ್ನು ಎದುರಿಸುತ್ತಿದೆ. ಕಾರು, ರಜಾದಿನದ ಮೋಜು, ಹೋಟೆಲ್ ಇತ್ಯಾದಿಗಳಿಗೆ ಖರ್ಚು ಮಾಡುತ್ತಿದ್ದ ಹೆಚ್ಚಿನ ಮಹಿಳೆಯರು ಇದೀಗ ಬೆಲೆ ಏರಿಕೆಯಿಂದ ಕಂಗೆಟ್ಟು ತಮ್ಮ ಮೇಕ್-ಅಪ್ ಸಾಮಗ್ರಿಗಳತ್ತ ಗಮನ ಹರಿಸತೊಡಗಿದ್ದಾರೆ!

ಆರ್ಥಿಕ ಹಿಂಜರಿತದಿಂದಾಗಿ ಜನರು ಕಾರು, ರಜಾ ಕಾಲದ ಪ್ರವಾಸ ಮತ್ತಿತರ ಐಷಾರಾಮಿ ವಿಷಯಗಳಿಂದ ವಿಮುಖರಾಗುತ್ತಿದ್ದು, ಸಣ್ಣಪುಟ್ಟ ಐಷಾರಾಮಿ ಸಂಗತಿಗಳಾದ ಮೇಕಪ್ ಮುಂತಾದವುಗಳತ್ತ ಗಮನ ಹರಿಸುತ್ತಿದ್ದಾರೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

ಜಗತ್ತಿನ ಪ್ರಮುಖ ಕಾಸ್ಮೆಟಿಕ್ ಕಂಪನಿಗಳಾದ ಲೋರಿಯಲ್, ಬೈರ್ಸ್‌ಡಾಫ್ ಮತ್ತು ಶಿಸೈಡೋ ಮುಂತಾದ ಕಂಪನಿಗಳ ಉತ್ಪನ್ನಗಳ ಮಾರಾಟದಲ್ಲಿ ಹೆಚ್ಚಳ ಕಂಡಿರುವುದು ಆರ್ಥಿಕ ತಜ್ಞರ ಅಭಿಪ್ರಾಯಕ್ಕೆ ಕಾರಣ. ವರ್ಷದ ಮೊದಲಾರ್ಧ ಭಾಗದಲ್ಲಿ ಲೋರಿಯಲ್ ಕಂಪನಿಯ ಉತ್ಪನ್ನಗಳ ಮಾರಾಟ ಶೇ.5.3ರಷ್ಟು ಹೆಚ್ಚಳವಾಗಿತ್ತು.

ಈ ಹಿಂದೆ 1929 ಮತ್ತು 1933ರ ಅವಧಿಯಲ್ಲಿ ಅಮೆರಿಕವು ಅನುಭವಿಸಿದ 'ಮಹಾನ್ ಆರ್ಥಿಕ ಹಿನ್ನಡೆ' ಸಂದರ್ಭ ಅಮೆರಿಕದ ಕೈಗಾರಿಕಾ ಉತ್ಪಾದನೆಯಲ್ಲಿ ಭಾರೀ ಕುಸಿತ ಕಂಡುಬಂದಿದ್ದ ಸಂದರ್ಭದಲ್ಲಿ ಈ ಸಿದ್ಧಾಂತಕ್ಕೆ ಚಾಲನೆ ದೊರೆತಿತ್ತು. ಅಂದರೆ ಆ ಅವಧಿಯಲ್ಲಿ ಕಾಸ್ಮೆಟಿಕ್ಸ್ ವಸ್ತುಗಳ ಮಾರಾಟವು ತೀವ್ರಗತಿಯಲ್ಲಿ ಏರಿಕೆ ಕಂಡಿತ್ತು.

ಬಜೆಟ್ ಮೇಲೆ ನಿಯಂತ್ರಣ ಇದ್ದಾಗ, ಜನರು ಹೆಚ್ಚಾಗಿ ಸಣ್ಣಪುಟ್ಟ ಐಷಾರಾಮಿ ವಸ್ತುಗಳತ್ತ ಮುಖಮಾಡುತ್ತಾರೆ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ಆರ್ಎಬಿ ಕ್ಯಾಪಿಟಲ್‌ನ ತಜ್ಞರಾದ ಧವಳ್ ಜೋಷಿ ಹೇಳಿರುವುದಾಗಿ ಟೆಲಿಗ್ರಾಫ್ ವರದಿ ಮಾಡಿದೆ.

1990 ಮತ್ತು 2001ರ ಆರ್ಥಿಕ ಹಿನ್ನಡೆ ಸಂದರ್ಭದಲ್ಲಿ, ಅಮೆರಿಕದಲ್ಲಿ ಮೇಕಪ್ ಸಾಮಗ್ರಿಗಳಿಗೆ ಬೇಡಿಕೆ ತೀವ್ರ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಸೌಂದರ್ಯಸಾಧನ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳ ಸಂಖ್ಯೆಯೂ ಭರ್ಜರಿಯಾಗಿ ಏರಿತ್ತು. 9/11 ಭಯೋತ್ಪಾದನಾ ದಾಳಿಯ ಬಳಿಕವೂ ಅಮೆರಿಕದಲ್ಲಿ ಲಿಪ್‌ಸ್ಟಿಕ್‌ಗಳ ಮಾರಾಟವು ದುಪ್ಪಟ್ಟು ಏರಿಕೆ ಕಂಡಿತ್ತು.

ಈ ಸಿದ್ಧಾಂತದ ಪ್ರಕಾರ, ಬಿಕ್ಕಟ್ಟಿನ ಸಂದರ್ಭದಲ್ಲಿ ಅಥವಾ ಆರ್ಥಿಕತೆ ಮೇಲೆ ಗ್ರಾಹಕರ ವಿಶ್ವಾಸ ಕಡಿಮೆ ಇರುವಾಗ, ತಮ್ಮ ಲಭ್ಯ ನಿಧಿಗಳ ಮೇಲೆ ಕನಿಷ್ಠ ಪರಿಣಾಮ ಬೀರಬಲ್ಲ ಉತ್ಪನ್ನಗಳತ್ತ ಜನರು ಮುಖ ಮಾಡುತ್ತಾರೆ. ಹೀಗಾಗಿ ಮಹಿಳೆಯರು ಲಿಪ್‌ಸ್ಟಿಕ್ ಮತ್ತಿತರ ಸೌಂದರ್ಯ ಸಾಧನಗಳಿಗಾಗಿ ಮತ್ತು ಪುರುಷರು ಹೊಸ ಕಾರು ಮುಂತಾದವುಗಳ ಬದಲು ಸಣ್ಣಪುಟ್ಟ ಗ್ಯಾಜೆಟ್‌ಗಳಿಗಾಗಿ ಹಣ ವೆಚ್ಚ ಮಾಡುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
2ನೇ ಉತ್ತೇಜನಾ ಪ್ಯಾಕೇಜ್ ಇನ್ನೆರಡು ದಿನದಲ್ಲಿ
ಸತ್ಯಂಗೆ ವಿಶ್ವ ಬ್ಯಾಂಕ್ 8 ವರ್ಷ ನಿಷೇಧ
ವಿಪ್ರೋ: 127 ದಶಲಕ್ಷ ಡಾಲರ್‌ಗೆ ಸಿಟಿ ಟೆಕ್ನಾಲಜಿ ಖರೀದಿ
ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ
ಬ್ಯಾರೆಲ್‌ಗೆ 40 ಡಾಲರ್‌ಗಿಂತ ಕೆಳಕ್ಕಿಳಿದ ಕಚ್ಚಾ ತೈಲ ಬೆಲೆ
ಹೊಸ ವರ್ಷಕ್ಕೆ ಸಾಲ ಬಡ್ಡಿ ದರ ಕಡಿತದ ಉಡುಗೊರೆ