ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸೈಬರ್ ಅಪರಾಧ ಕಾನೂನು ಮತ್ತಷ್ಟು ಕಠಿಣ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೈಬರ್ ಅಪರಾಧ ಕಾನೂನು ಮತ್ತಷ್ಟು ಕಠಿಣ
ಸೈಬರ್ ಭಯೋತ್ಪಾದನೆಯಲ್ಲಿ ತೊಡಗಿರುವವರ ವಿರುದ್ಧದ ಕಾನೂನನ್ನು ಮತ್ತಷ್ಟು ಬಲಪಡಿಸಿರುವ ಸಂಸತ್ತು, ಅಪರಾಧಿಗಳಿಗೆ ಜೀವಾವಧಿವರೆಗೂ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ಎಲೆಕ್ಟ್ರಾನಿಕ್ ರೂಪದಲ್ಲಿ ಅಶ್ಲೀಲ ವಸ್ತುಗಳನ್ನು ಪ್ರಕಾಶಿಸುವ ಮತ್ತು ಪ್ರಸಾರ ಮಾಡುವವರಿಗೆ ಐದು ವರ್ಷಗಳವರೆಗಿನ ಜೈಲು ಶಿಕ್ಷೆ ಪ್ರಸ್ತಾಪಗಳನ್ನು ಸೇರಿಸಿದೆ.

ಮಂಗಳವಾರ ಸಂಸತ್ತು ಅಂಗೀಕರಿಸಿರುವ ಈ ಕುರಿತ ಮಾಹಿತಿ ತಂತ್ರಜ್ಞಾನ ತಿದ್ದುಪಡಿ ಮಸೂದೆಯಲ್ಲಿ, ಕಂಪ್ಯೂಟರು ಮತ್ತು ಸಂಪರ್ಕ ಸಾಧನಗಳ ದುರ್ಬಳಕೆಗೆ ಸಂಬಂಧಿಸಿದ ಅಪರಾಧಗಳಿಗೆ ಕಠಿಣ ಶಿಕ್ಷೆ ವಿಧಿಸುವ ಪ್ರಸ್ತಾವನೆಗಳಿವೆ.

ಎಲೆಕ್ಟ್ರಾನಿಕ್ ರೂಪದಲ್ಲಿ ಲೈಂಗಿಕವಾಗಿ ಪ್ರಚೋದನಕಾರಿ ವಿಷಯಗಳ ರವಾನೆ, ಲೈಂಗಿಕತೆ ದೃಶ್ಯಗಳಿರುವ ವೀಡಿಯೋ, ಗೌಪ್ಯತೆಯ ಉಲ್ಲಂಘನೆ, ಅಂತರ್-ಮಾಧ್ಯಮ ಅಥವಾ ಇ-ಕಾಮರ್ಸ್ ಮೂಲಕ ಡೇಟಾ ಸೋರಿಕೆ ಮುಂತಾದವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಪ್ರಸ್ತಾವನೆಗಳು ಇದರಲ್ಲಿವೆ.

ಕದಿಯಲಾದ ಕಂಪ್ಯೂಟರ್ ಸಂಪನ್ಮೂಲಗಳನ್ನು ಅಪ್ರಾಮಾಣಿಕವಾಗಿ ಪಡೆಯುವುದು, ಐಡೆಂಟಿಟಿ ಕಳವು, ಕಂಪ್ಯೂಟರ್ ಸಂಪನ್ಮೂಲ ಬಳಸಿ ಬೇರೊಬ್ಬರ ಹೆಸರಿನಲ್ಲಿ ವಂಚನೆ ಎಸಗುವುದು ಮತ್ತು ಏಕಾಂತತೆಯ ಉಲ್ಲಂಘನೆ ಮುಂತಾದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ.

ದೇಶದ ಏಕತೆ, ಸಮಗ್ರತೆ, ಭದ್ರತೆ ಮತ್ತು ಸಾರ್ವಭೌಮತೆಗೇ ಬೆದರಿಕೆಯೊಡ್ಡುವ ಮತ್ತು ಜನರಲ್ಲಿ ಭೀತಿ ಉಂಟು ಮಾಡುವಂತಹ ಸೈಬರ್ ಭಯೋತ್ಪಾದನೆ ಕೃತ್ಯಗಳಲ್ಲಿ ತೊಡಗುವವರಿಗೆ ಜೀವಾವಧಿ ಶಿಕ್ಷೆಯ ಪ್ರಸ್ತಾಪ ಇದರಲ್ಲಿದೆ. ಲೈಂಗಿಕವಾಗಿ ಪ್ರಚೋದನಾತ್ಮಕ ವಿಷಯಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಪ್ರಸಾರ ಮಾಡುವವರಿಗೆ ಐದು ವರ್ಷಗಳ ವರೆಗೆ ಕಾರಾಗೃಹ ಶಿಕ್ಷೆ ಮತ್ತು 10 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ.

ಅಂತೆಯೇ, ಲೈಂಗಿಕ ಪ್ರಚೋದನೆ ಸಂಬಂಧ ಮಕ್ಕಳನ್ನು ಬಿಂಬಿಸುವ ಎಲೆಕ್ಟ್ರಾನಿಕ್ ವಿಷಯಗಳ ಪ್ರಸಾರಕ್ಕೆ ಕೂಡ ಐದು ವರ್ಷಗಳವರೆಗಿನ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ.ವರೆಗಿನ ದಂಡ ವಿಧಿಸಲಾಗುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲಿಪ್‌ಸ್ಟಿಕ್ ಮಾರಾಟ ಹೆಚ್ಚಿಸಿದ ಆರ್ಥಿಕ ಹಿಂಜರಿತ!
2ನೇ ಉತ್ತೇಜನಾ ಪ್ಯಾಕೇಜ್ ಇನ್ನೆರಡು ದಿನದಲ್ಲಿ
ಸತ್ಯಂಗೆ ವಿಶ್ವ ಬ್ಯಾಂಕ್ 8 ವರ್ಷ ನಿಷೇಧ
ವಿಪ್ರೋ: 127 ದಶಲಕ್ಷ ಡಾಲರ್‌ಗೆ ಸಿಟಿ ಟೆಕ್ನಾಲಜಿ ಖರೀದಿ
ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ
ಬ್ಯಾರೆಲ್‌ಗೆ 40 ಡಾಲರ್‌ಗಿಂತ ಕೆಳಕ್ಕಿಳಿದ ಕಚ್ಚಾ ತೈಲ ಬೆಲೆ