ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜ.1ರಂದು 6.75 ಶತಕೋಟಿ ತಲುಪಲಿರುವ ಜನಸಂಖ್ಯೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜ.1ರಂದು 6.75 ಶತಕೋಟಿ ತಲುಪಲಿರುವ ಜನಸಂಖ್ಯೆ
ಹೊಸ ವರ್ಷದ ದಿನದಂದು ವಿಶ್ವದ ಜನಸಂಖ್ಯೆಯು 6.75 ಶತಕೋಟಿಗೆ ತಲುಪಲಿದೆ ಎಂದು ಜನನ ನಿಯಂತ್ರಣಕ್ಕೆ ಪ್ರೋತ್ಸಾಹ ನೀಡುತ್ತಿರುವ ಜರ್ಮನಿಯ ಸಂಸ್ಥೆಯೊಂದು ಮಂಗಳವಾರ ತಿಳಿಸಿದೆ.

ಭೂಮಿಯ ಜನಸಂಖ್ಯೆಯು ಈ ವರ್ಷ 82 ದಶಲಕ್ಷ ಹೆಚ್ಚಿದೆ ಮತ್ತು ತನ್ನ ಅಂದಾಜಿನ ಪ್ರಕಾರ ಜನವರಿ 1ರ ವೇಳೆಗೆ ಇದು 675,16,43,600ಕ್ಕೆ ಏರಲಿದೆ ಎಂದು ಜರ್ಮನಿಯ ವಿಶ್ವ ಜನಸಂಖ್ಯಾ ಪ್ರತಿಷ್ಠಾನ ಹೇಳಿದೆ.

ಜನಸಂಖ್ಯೆಯ ಹೆಚ್ಚಳವು ಹೆಚ್ಚಾಗಿ ಕಂಡುಬರುವುದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ. ಇಲ್ಲಿ ಮಹಿಳೆಯರಿಗೆ ಸೂಕ್ತ ಗರ್ಭನಿರೋಧಕ ವ್ಯವಸ್ಥೆ ದೊರೆಯದಿರುವುದರಿಂದಾಗಿ, ಐಚ್ಛಿ ಕವಾಗಿಯೋ, ಅನೈಚ್ಛಿಕವಾಗಿಯೋ, ಅವರು ಗರ್ಭ ಧರಿಸುತ್ತಿದ್ದರು ಎಂದು ಹ್ಯಾನೋವರ್ ಮೂಲದ ಸಂಸ್ಥೆ ತಿಳಿಸಿದೆ.

ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಆ ರಾಷ್ಟ್ರಗಳಲ್ಲಿ ಸಂಪನ್ಮೂಲ, ವಿದ್ಯಾಭ್ಯಾಸ ಮತ್ತು ಆರೋಗ್ಯ ಸೌಲಭ್ಯಗಳು ಕಡಿಮೆ ಪ್ರಮಾಣದಲ್ಲಿವೆ ಎಂದು ಪ್ರತಿಷ್ಠಾನ ಹೇಳಿದೆ.

ಅದರ ಪ್ರಕಾರ, ಜರ್ಮನಿಯಲ್ಲಿ ಜನಿಸುವ ಒಂದು ಮಗು ಸರಾಸರಿ 79 ವರ್ಷದವರೆಗೆ ಜೀವಿಸಬಹುದು, ಆದರೆ ಆಫ್ರಿಕಾದಲ್ಲಿ ಜನಿಸುವ ಮಗುವಿನ ಜೀವಿತಾವಧಿ ಸರಾಸರಿ 54 ವರ್ಷ ಮಾತ್ರ.

ಬಡತನವನ್ನು ಮೂಲದಲ್ಲೇ ನಿವಾರಿಸಬೇಕಿದ್ದರೆ, ಅನೈಚ್ಛಿಕ ಗರ್ಭಧಾರಣೆ ತಡೆಯುವುದಕ್ಕಾಗಿ ಮಹಿಳೆಯರಿಗೆ ನಾವು ಸಹಾಯ ಮಾಡಬೇಕು ಎಂದು ಹೇಳಿರುವ ಪ್ರತಿಷ್ಠಾನದ ಕಾರ್ಯದರ್ಶಿ ರೆನೇಟಟ್ ಬಾಯರ್, ಲೈಂಗಿಕ ಶಿಕ್ಷಣ ಮತ್ತು ಸಂತಾನ ನಿಯಂತ್ರಣಕ್ಕೆ ನಾವು ಹೆಚ್ಚು ವ್ಯಯಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸೈಬರ್ ಅಪರಾಧ ಕಾನೂನು ಮತ್ತಷ್ಟು ಕಠಿಣ
ಲಿಪ್‌ಸ್ಟಿಕ್ ಮಾರಾಟ ಹೆಚ್ಚಿಸಿದ ಆರ್ಥಿಕ ಹಿಂಜರಿತ!
2ನೇ ಉತ್ತೇಜನಾ ಪ್ಯಾಕೇಜ್ ಇನ್ನೆರಡು ದಿನದಲ್ಲಿ
ಸತ್ಯಂಗೆ ವಿಶ್ವ ಬ್ಯಾಂಕ್ 8 ವರ್ಷ ನಿಷೇಧ
ವಿಪ್ರೋ: 127 ದಶಲಕ್ಷ ಡಾಲರ್‌ಗೆ ಸಿಟಿ ಟೆಕ್ನಾಲಜಿ ಖರೀದಿ
ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ