ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹಣದುಬ್ಬರ ಶೇ.2ಕ್ಕಿಂತ ಇಳಿಕೆ ಸಾಧ್ಯತೆ: ಅಭಿಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ಶೇ.2ಕ್ಕಿಂತ ಇಳಿಕೆ ಸಾಧ್ಯತೆ: ಅಭಿಕ್
ಪ್ರಸಕ್ತ ಆರ್ಥಿಕ ವರ್ಷದ ಅಂತ್ಯದಲ್ಲಿ ಅಗತ್ಯ ದಿನಸಿ ವಸ್ತುಗಳು ಹಾಗೂ ಉತ್ಪಾದಕ ವಸ್ತುಗಳ ದರಗಳ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಣದುಬ್ಬರ ಶೇ.2ಕ್ಕಿಂತ ಕಡಿಮೆಯಾಗುವ ಸಾಧ್ಯತೆಗಳಿವೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.

ಉತ್ಪಾದಕ ವಸ್ತುಗಳು ಹಾಗೂ ಅಗತ್ಯ ವಸ್ತುಗಳ ಹೆಚ್ಚಿನ ದರ ಇಳಿಕೆಯಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ದೇಶಧ ಹಣದುಬ್ಬರ ಶೇ.2ಕ್ಕಿಂತ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮುಖ್ಯ ಆರ್ಥಿಕ ತಜ್ಞ ಅಭಿಕ್ ಬರುವಾ ಹೇಳಿದ್ದಾರೆ.

ಅಗಸ್ಟ್ ತಿಂಗಳಲ್ಲಿ ಶೇ.13ಕ್ಕೆ ಹತ್ತಿರವಿದ್ದ ಹಣದುಬ್ಬರ, ಸತತ ಆರು ವಾರಗಳಲ್ಲಿ ನಿರಂತರ ಇಳಿಕೆ ಕಂಡು ಹಣದುಬ್ಬರ ಡಿಸೆಂಬರ್ 6 ಕ್ಕೆ ಅಂತ್ಯಗೊಂಡಂತೆ ಶೇ.6.84ಕ್ಕೆ ತಲುಪಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ಮತ್ತು ರಿವರ್ಸ್ ರೆಪೊ ದರಗಳಲ್ಲಿ 100 ಬೇಸಿಸ್ ಪಾಯಿಂಟ್‌ಗಳ ಕಡಿತ ಮಾಡುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಡಿಸೆಂಬರ್ 13ಕ್ಕೆ ವಾರಂತ್ಯಗೊಂಡಂತೆ ಹಣದುಬ್ಬರ ಶೇ.6.48 ರಿಂದ ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಆರ್ಥಿಕ ತಜ್ಞ ಬರುವಾ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾರುತಿಯಿಂದ ಕಾರು ಉತ್ಪಾದನೆ ಕಡಿತ
ಜ.1ರಂದು 6.75 ಶತಕೋಟಿ ತಲುಪಲಿರುವ ಜನಸಂಖ್ಯೆ
ಸೈಬರ್ ಅಪರಾಧ ಕಾನೂನು ಮತ್ತಷ್ಟು ಕಠಿಣ
ಲಿಪ್‌ಸ್ಟಿಕ್ ಮಾರಾಟ ಹೆಚ್ಚಿಸಿದ ಆರ್ಥಿಕ ಹಿಂಜರಿತ!
2ನೇ ಉತ್ತೇಜನಾ ಪ್ಯಾಕೇಜ್ ಇನ್ನೆರಡು ದಿನದಲ್ಲಿ
ಸತ್ಯಂಗೆ ವಿಶ್ವ ಬ್ಯಾಂಕ್ 8 ವರ್ಷ ನಿಷೇಧ