ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ದೋಷ: ಕಾರುಗಳನ್ನು ಹಿಂಪಡೆಯಲು ಟೋಯೊಟಾ ನಿರ್ಧಾರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದೋಷ: ಕಾರುಗಳನ್ನು ಹಿಂಪಡೆಯಲು ಟೋಯೊಟಾ ನಿರ್ಧಾರ
ಟೊಯೊಟಾ ಕಾರುಗಳ ಚಾಲನಾ ನಿಯಂತ್ರಣ ಉಪಕರಣದಲ್ಲಿ ತೊಂದರೆಗಳು ಎದುರಾಗಿದ್ದರಿಂದ, 120,000 ಕಾರುಗಳನ್ನು ವಾಪಸ್ ಕರೆಸಿಕೊಳ್ಳಲು ಟೊಯೊಟಾ ಮೋಟಾರ್‌ ಕಾರ್ಪೋರೇಶನ್‌ ನಿರ್ಧರಿಸಿದೆ ಎಂದು ಚೀನಾದ ಗುಣಮಟ್ಟ ವಿಭಾಗದ ಕಾವಲು ಸಮಿತಿ ತಿಳಿಸಿದೆ.

ಟೋಯೊಟಾ ಮತ್ತು ಚೀನಾದ ತೈಯಾನ್‌ಜಿನ್ ಎಫ್‌ಎಡಬ್ಲು ಗ್ರೂಪ್‌ ಜಂಟಿ ಸಹಭಾಗಿತ್ವದ ಕಂಪೆನಿ, ಮುಂಬರುವ ಶುಕ್ರವಾರದಿಂದ ಚಾಲನಾ ಉಪಕರಣದಲ್ಲಿ ತೊಂದರೆ ಕಾಣಿಸಿಕೊಂಡಿರುವ 121,930 ಕಾರುಗಳನ್ನು ವಾಪಸ್‌ ಪಡೆಯುವ ಕಾರ್ಯ ಆರಂಭಿಸಲಿದೆ ಎಂದು ಚೀನಾದ ಗುಣಮಟ್ಟ ವಿಭಾಗದ ಅಡಳಿತಾಧಿಕಾರಿಗಳು ತಿಳಿಸಿದ್ದಾರೆ.

ಗುಣಮಟ್ಟದ ತೊಂದರೆಯಿಂದಾಗಿ ವಾಪಸ್ ಪಡೆಯುತ್ತಿರುವ ಕಾರುಗಳಲ್ಲಿ 2004ರಲ್ಲಿ ಬಿಡುಗಡೆ ಮಾಡಲಾದ ಐಶಾರಾಮಿ ಲೆಕ್ಸಸ್‌ ಕಾರು ಹಾಗೂ 2005 ಮತ್ತು 2006ರಲ್ಲಿ ಬಿಡುಗಡೆ ಮಾಡಲಾದ ಕ್ರೌನ್ ಮತ್ತು ರೈಝ್ ಕಾರುಗಳ ಮಾಡೆಲ್‌ಗಳು ಸೇರ್ಪಡೆಯಾಗಿವೆ ಎಂದು ಮೂಲಗಳು ತಿಳಿಸಿವೆ.

ಕಾರುಗಳ ಪವರ್ ಸ್ಟೀಯರಿಂಗ್‌‌ನಲ್ಲಿ ವಿದ್ಯುತ್‌ಚಾಲಿತ ವ್ಯವಸ್ಥೆಯಲ್ಲಿ ದೋಷಗಳು ಎದುರಾಗಿವೆ ಎಂದು ಕಂಪೆನಿಯ ಮೂಲಗಳು ಪ್ರಕಟಿಸಿವೆ.

ಹಲವು ದೇಶಗಳಿಗೆ ಅದೇ ಮಾಡೆಲ್‌ ಕಾರುಗಳನ್ನು ರಫ್ತು ಮಾಡಜಲಾಗಿದ್ದು ಅವುಗಳನ್ನು ವಾಪಸ್‌ ಕರೆಸಿಕೊಳ್ಳಲಾಗುವುದೇ ಎನ್ನುವ ಪ್ರಶ್ನೆಗೆ ಉತ್ತರಿಸಲು ಟೋಯೊಟಾ ಅಧಿಕಾರಿಗಳು ಲಭ್ಯವಾಗಿಲ್ಲವೆಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜೂನ್‌ವರೆಗೆ 50 ಸಾ.ಐಟಿ ಉದ್ಯೋಗಿಗಳ ವಜಾ?
ಹಣದುಬ್ಬರ ಶೇ.2ಕ್ಕಿಂತ ಇಳಿಕೆ ಸಾಧ್ಯತೆ: ಅಭಿಕ್
ಮಾರುತಿಯಿಂದ ಕಾರು ಉತ್ಪಾದನೆ ಕಡಿತ
ಜ.1ರಂದು 6.75 ಶತಕೋಟಿ ತಲುಪಲಿರುವ ಜನಸಂಖ್ಯೆ
ಸೈಬರ್ ಅಪರಾಧ ಕಾನೂನು ಮತ್ತಷ್ಟು ಕಠಿಣ
ಲಿಪ್‌ಸ್ಟಿಕ್ ಮಾರಾಟ ಹೆಚ್ಚಿಸಿದ ಆರ್ಥಿಕ ಹಿಂಜರಿತ!