ಜಾಗತಿಕ ಆರ್ಥಿಕ ಕುಸಿತದಿಂದಾಗಿ ವಜ್ರ ಮತ್ತು ಚಿನ್ನಾಭರಣಗಳ ವಹಿವಾಟು ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದು 1 ಲಕ್ಷ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ವಹಿವಾಟು ಸಂಘಟನೆ ತಿಳಿಸಿದೆ. ಕಳೆದ ನಾಲ್ಕು ದಶಕಗಳಲ್ಲಿ ಪ್ರಥಮ ಬಾರಿಗೆ ವಜ್ರ ಮತ್ತು ಚಿನ್ನಾಭರಣ ಕೈಗಾರಿಕೋದ್ಯಮಕ್ಕೆ ಸಂಕಷ್ಟದ ಸ್ಥಿತಿ ಎದುರಾಗಿದ್ದರಿಂದ 1 ಲಕ್ಷ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಗೀತಾಂಜಲಿ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಮೆಹುಲ್ ಚೊಕ್ಸಿ ಹೇಳಿದ್ದಾರೆ. ವಜ್ರ ಮತ್ತು ಚಿನ್ನಾಭರಣಗಳ ರಫ್ತು ವಹಿವಾಟು ಕುಸಿತ ಹಾಗೂ ಅಮುದು ವಹಿವಾಟು ಸ್ಥಗಿತಗೊಳಿಸಿದ್ದರಿಂದ 50 ಬಿಲಿಯನ್ ಡಾಲರ್ ವಹಿವಾಟು ನಡೆಸುವ ಉದ್ಯಮದಲ್ಲಿ ಸುಮಾರು 1.3 ಮಿಲಿಯನ್ ನೌಕರರು ಬೀದಿಪಾಲಾಗಿದ್ದಾರೆ ಎಂದು ತಿಳಿಸಿದ್ದಾರೆ. ಅಮುದು ವಹಿವಾಟಿನಲ್ಲಿ ಶೇ.40 ರಷ್ಟು ಕುಸಿತವಾದ ಹಿನ್ನೆಲೆಯಲ್ಲಿ ಜೆಮ್ಸ್ ಆಂಡ್ ಜೆವ್ವಲರಿ ಎಕ್ಸಪೋರ್ಟ್ ಪ್ರಮೋಷನ್ ಕೌನ್ಸಿಲ್ ಅಮುದು ವಹಿವಾಟನ್ನು ಒಂದು ತಿಂಗಳ ಅವಧಿಗೆ ರದ್ದುಗೊಳಿಸಿದೆ ಎಂದು ವಹಿವಾಟಿನ ಮೂಲಗಳು ತಿಳಿಸಿವೆ. |