ನೂತನವಾಗಿ ತಯಾರಿಸಲಾದ 'ಎ ಸ್ಟಾರ್' ಸಣ್ಣ ಕಾರುಗಳನ್ನು ಯುರೋಪ್ ರಾಷ್ಟ್ರಗಳಿಗೆ ರಫ್ತು ವಹಿವಾಟು ಆರಂಭಿಸಲಾಗಿದೆ ಎಂದು ದೇಶದ ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಝುಕಿ ಪ್ರಕಟಿಸಿದೆ.
ಗುರ್ಗಾಂವ್ ರೈಲ್ವೆ ನಿಲ್ದಾಣದಿಂದ ಕಾರುಗಳನ್ನು ಗುಜರಾತ್‌ನ ಮಂದ್ರಾ ಬಂದರಿಗೆ ಸಾಗಿಸಲಾಗುತ್ತಿದೆ ಎಂದು ಮಾರುತಿ ಸುಝುಕಿ ಕಂಪೆನಿಯ ವ್ಯವಸ್ಥಾಪಕ ಕಾರ್ಯನಿರ್ವಾಹಕಾಧಿಕಾರಿ ಎಂ.ಎಂ. ಸಿಂಗ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂದಿನ ವರ್ಷದ ಆರಂಭದಲ್ಲಿ ಸುಮಾರು 1 ಲಕ್ಷ ಕಾರುಗಳನ್ನು ರಫ್ತು ಮಾಡಲು ಕಂಪೆನಿ ನಿರ್ಧರಿಸಿದೆ.ಮುಂಬರುವ ದಿನಗಳಲ್ಲಿ 'ಎ ಸ್ಟಾರ್'ಕಾರುಗಳ ರಫ್ತು ವಹಿವಾಟಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಕಂಪೆನಿಯ ಅಡಳಿತ ಮಂಡಳಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಮಾರುತಿ ಸುಝುಕಿ 'ಎ ಸ್ಟಾರ್' ಕಾರುಗಳನ್ನು ಯುರೋಪ್ ರಾಷ್ಟಗಳಲ್ಲಿ ಸುಝುಕಿ ಅಲ್ಟೋ ಬ್ರ್ಯಾಂಡ್ ಎನ್ನುವ ಹೆಸರಿನ ಅಡಿಯಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಕಂಪೆನಿಯ ವ್ಯವಸ್ಥಾಪಕ ಕಾರ್ಯನಿರ್ವಾಹಕ ಅಧಿಕಾರಿ ಸಿಂಗ್ ತಿಳಿಸಿದ್ದಾರೆ. |