ಆರ್ಥಿಕ ನೀತಿಯನ್ನು ಇನ್ನಷ್ಟು ಸಡಿಲಗೊಳಿಸುವ ಮಾತುಗಳ ನಡುವೆಯೇ ಮೂರನೇ ತ್ರೈಮಾಸಿಕ ಆರ್ಥಿಕ ನೀತಿ ವಿಮರ್ಶೆಯನ್ನು ಜನವರಿ 27ರಂದು ನಡೆಸುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ಹೇಳಿದೆ.
"ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿರುವ ಡಾ. ಸುಬ್ಬಾರಾವ್ 2008-0ನೇ ವರ್ಷದ ಮೂರನೇ ತ್ರೈಮಾಸಿಕ ಆರ್ಥಿಕ ನೀತಿ ವಿಮರ್ಶೆಯನ್ನು ಜನವರಿ 27, 2009ರಂದು ಪ್ರಸ್ತುತ ಪಡಿಸಲಿದ್ದಾರೆ" ಎಂದು ಸೆಂಟ್ರಲ್ ಬ್ಯಾಂಕ್ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಸತತ ಏಳನೇ ವಾರದಲ್ಲೂ ಹಣದುಬ್ಬರ ಕುಸಿತದೊಂದಿಗೆ 6.61 ಪ್ರತಿಶತದಲ್ಲಿ ಡಿಸೆಂಬರ್ 13ರಂದು ಕೊನೆಗೊಳ್ಳುವುದರೊಂದಿಗೆ, ಆರ್‌ಬಿಐ ಇನ್ನಷ್ಟು ಬಡ್ಡಿದರ ಕಡಿತಗೊಳಿಸುವುದು ಅಗತ್ಯವೆನಿಸಿದೆ. |