ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಉತ್ತರಖಂಡದಲ್ಲಿ ನ್ಯಾನೊಗೆ ಇನ್ನಷ್ಟು ಭೂಮಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉತ್ತರಖಂಡದಲ್ಲಿ ನ್ಯಾನೊಗೆ ಇನ್ನಷ್ಟು ಭೂಮಿ
ಉತ್ತರಖಂಡ ಸರಕಾರ ಹೆಚ್ಚುವರಿ 45 ಎಕರೆ ಭೂಮಿಯನ್ನು ಒದಗಿಸುವುದರೊಂದಿಗೆ ಟಾಟಾ ಮೋಟಾರ್ಸ್‌ನ ವಿಳಂಬಿತ ನ್ಯಾನೊ ಯೋಜನೆಗೆ ಪ್ರೋತ್ಸಾಹ ದೊರಕಂತಾಗಿದೆ.

"ಈಗಾಗಲೇ ಪಾಟ್ನಾನಗರದಲ್ಲಿ ಮಿನಿ ಟ್ರಕ್ ಮತ್ತು ನ್ಯಾನೊದ ಕೆಲ ಬಿಡಿಭಾಗಳನ್ನು ತಯಾರಿಸುತ್ತಿರುವ ಟಾಟಾ ಗ್ರೂಪ್‌ಗೆ 45 ಎಕರೆ ಭೂಮಿಯನ್ನು ಒದಗಿಸುವುದಾಗಿ ರಾಜ್ಯ ಸರಕಾರ ನಿರ್ಣಯ ತೆಗೆದುಕೊಂಡಿದೆ" ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಐ.ಕೆ ಪಾಂಡೆ ಹೇಳಿದ್ದಾರೆ.

ಈ ನಿರ್ಣಯವನ್ನು ಮುಖ್ಯಮಂತ್ರಿ ಬಿ.ಸಿ ಖಂಡುರಿ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಹಿಂದಿನ ಕಾಂಗ್ರೆಸ್ ಸರಕಾರ ಪಾಟ್ನಾನಗರದಲ್ಲಿನ ಮಿನಿ ಟ್ರಕ್ ಯೋಜನೆಗೆ 955 ಎಕೆರೆ ಭೂಮಿಯನ್ನು ಟಾಟಾ ಮೋಟಾರ್ಸ್‌ಗೆ ಒದಗಿಸಿತ್ತು. ಕಂಪೆನಿಗೆ 1,000 ಎಕರೆ ಭೂಮಿಯನ್ನು ನೀಡುವುದಾಗಿ ಭರವಸೆ ನೀಡಲಾಗಿತ್ತು ಆದರೆ 955 ಎಕರೆಗಳನ್ನು ಮಂಜೂರು ಮಾಡಲಾಗಿತ್ತು ಎಂದು ಪಾಂಡೆ ಹೇಳಿದ್ದಾರೆ.

ವಿಶ್ವದ ಅತಿ ಕಡಿಮೆ ವೆಚ್ಚದ ಕಾರು ಯೋಜನೆ ಸಿಂಗೂರು ಬಿಕ್ಕಟ್ಟಿನಿಂದ ವಿಳಂಬಗೊಂಡಿದ್ದು, ಹೆಚ್ಚುವರಿ ಭೂಮಿಯ ಮಂಜೂರಾತಿ ಕಂಪನಿಗೆ ಸಹಾಯಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜನವರಿ 27ಕ್ಕೆ ಆರ್‌ಬಿಐನಿಂದ ಆರ್ಥಿಕ ನೀತಿ ವಿಮರ್ಶೆ
ಯುರೋಪ್‌ಗೆ ಎ ಸ್ಟಾರ್‌ ಕಾರುಗಳ ರಫ್ತು: ಮಾರುತಿ
ವಜ್ರಾಭರಣ ಉದ್ಯಮ ಕುಸಿತ:1ಲಕ್ಷ ಉದ್ಯೋಗಿಗಳ ವಜಾ
ಹಣದುಬ್ಬರ ದರ ಶೇ.6.61ಕ್ಕೆ ಇಳಿಕೆ
ದೋಷ: ಕಾರುಗಳನ್ನು ಹಿಂಪಡೆಯಲು ಟೋಯೊಟಾ ನಿರ್ಧಾರ
ಜೂನ್‌ವರೆಗೆ 50 ಸಾ.ಐಟಿ ಉದ್ಯೋಗಿಗಳ ವಜಾ?