ಅಂತಾರಾಷ್ಟ್ರೀಯ ಮಟ್ಟಕ್ಕೆ ಸರಿಹೊಂದುವಂತೆ ನೇಪಾಳ ಆಯಿಲ್ ಕಾರ್ಪೋರೇಶನ್(ಎನ್ಓಸಿ) ಮತ್ತೆ ಪ್ರೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಸರಿದೂಗಿಸಿಕೊಂಡಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ಆರ್ಎಸ್ಎಸ್ ಶನಿವಾರ ವರದಿ ಮಾಡಿದೆ.
ಶುಕ್ರವಾರ ಸಂಜೆ ನಡೆದ ಸಭೆಯಲ್ಲಿ ಎನ್ಓಸಿಯ ನಿರ್ದೇಶಕ ಮಂಡಳಿ ಈ ನಿರ್ಣಯವನ್ನು ತೆಗೆದುಕೊಂಡಿದೆ. ಪೆಟ್ರೋಲ್ ಬೆಲೆಯನ್ನು 5 ರೂಗಳಷ್ಟು ಇಳಿಸಿರುವ ಎನ್ಓಸಿ ಲೀಟರ್‌ಗೆ 80.50 ನೇಪಾಳಿ ರೂ.ಗಳನ್ನು(1.059 ಅಮೆರಿಕನ್ ಡಾಲರ್) ನಿಗದಿಪಡಿಸಿದೆ. ಡೀಸಲ್ ಮತ್ತು ಸೀಮೆಎಣ್ಣೆ ಬೆಲೆಗಳನ್ನು ಒಂದು ರೂಪಾಯಿಯಷ್ಟು(0.013 ಡಾಲರ್) ಕಡಿತಗೊಳಿಸಿ ಲೀಟರ್‌ಗೆ 59.50 ರೂ.ಗೆ(0.78 ಡಾಲರ್) ಇಳಿಸಿದೆ.
ವಾಯುಯಾನಗಳ ಇಂಧನ ದರದಲ್ಲಿ 200 ಡಾಲರ್‌ಗಳಷ್ಟು ಕಡಿತಗೊಳಿಸಿರುವ ಎನ್ಓಸಿ ಕಿಲೊಮೀಟರ್ ಒಂದಕ್ಕೆ 1200 ಡಾಲರ್‌ಗಳಿಂದ 1000 ಡಾಲರ್ ನಿಗದಿಪಡಿಸಿದೆ. ದೇಶೀಯ ವಿಮಾನಗಳಿಗೆ ವಾಯುಯಾನ ಇಂಧನ ದರವನ್ನು 5 ರೂಪಾಯಿಗಳಷ್ಟು ಇಳಿಸಿ 85 ರೂಪಾಯಿ(1.118 ಡಾಲರ್) ಎಂದು ನಿಗದಿ ಪಡಿಸಲಾಗಿದೆ.
ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ 50 ರೂ ಕಡಿತಗೊಳಿಸಿ 1,150 ರೂ.(15.13 ಡಾಲರ್)ಗಳಾಗಿ ನಿಗದಿ ಪಡಿಸಲಾಗಿದೆ. ಎಲ್‌ಪಿಜಿ ಸಿಲಿಂಡರ್‌ಗಳಿಗೆ 1,130 ರೂ.(14.86 ಡಾಲರ್)ಗಳಾಗಿ ನಿಗದಿ ಪಡಿಸಲಾಗಿದೆ. |