ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮಾರುತಿ: ಹೊಸ ಕಾರುಗಳು ಯುರೋಪಿಗೆ ರಫ್ತು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾರುತಿ: ಹೊಸ ಕಾರುಗಳು ಯುರೋಪಿಗೆ ರಫ್ತು
ರಾಷ್ಟ್ರದಲ್ಲೇ ಪ್ರಯಾಣ ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ, ಹೊಸದಾಗಿ ಮಾರುಕಟ್ಟೆಗೆ ಬಂದಿರುವ ತಮ್ಮ ಎ-ಸ್ಟಾರ್ ಎಂಬ ಸಣ್ಣ ಕಾರುಗಳನ್ನು ಯುರೋಪಿಗೆ ರಫ್ತು ಮಾಡಲಾರಂಭಿಸಿರುವುದಾಗಿ ಶುಕ್ರವಾರ ಪ್ರಕಟಿಸಿದೆ.

ಗುರ್‌ಗಾವ್ ರೈಲ್ವೆ ನಿಲ್ದಾಣದಿಂದ ರಫ್ತಿಗಾಗಿನ ಎ-ಸ್ಟಾರ್‌ ಕಾರುಗಳ ಪ್ರಥಮ ರವಾನೆ ಗುಜರಾತ್‌ನ ಮುಂಡ್ರಾ ಪೋರ್ಟ್ ತಲುಪಿತು.

ಈ ಮೊದಲು, 2009ರಿಂದ ಈಗಾಗಲೇ ಇರುವ ಮಾಡೆಲ್‌ಗಳ ರಫ್ತನ್ನು 100,000 ಯೂನಿಟ್‌ಗಳಿಗೆ ಏರಿಸುವುದಾಗಿ ಮತ್ತು ಎ-ಸ್ಟಾರ್ ಕಾರುಗಳನ್ನು ದೊಡ್ಡ ಪ್ರಮಾಣದಲ್ಲಿ ಯುರೋಪಿಯನ್ ಮಾರುಕಟ್ಟೆಗಳಿಗೆ ರಫ್ತು ಮಾಡುವುದಾಗಿ ಕಂಪೆನಿ ಪ್ರಕಟಿಸಿತ್ತು.

"ಎ-ಸ್ಟಾರ್ ಕಾರುಗಳನ್ನು ಸುಜುಕಿ ಅಲ್ಟೊ ಬ್ರಾಂಡ್‌ನಡಿಯಲ್ಲಿ ಯುರೋಪ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ಮಾರುತಿ ಹೊಸ ಪೋರ್ಟ್‌ನಲ್ಲಿ ಹಣತೊಡಗಿಸಿದೆ ಮತ್ತು ಕಾರು ತಯಾರಿಕೆಯನ್ನು ಮುಂಬಯಿ ಪೋರ್ಟ್‌ಗೆ ಮೀಸಲಿಟ್ಟಿದೆ" ಎಂದು ಕಂಪೆನಿಯ ಕಾರ್ಯನಿರ್ವಹಣಾ ಅಧಿಕಾರಿ (ಪ್ರೊಡಕ್ಷನ್) ಎಂ.ಎಂ ಸಿಂಗ್ ತಿಳಿಸಿದ್ದಾರೆ.

"ನಾವು ಮುಂಡ್ರಾ ಪೋರ್ಟ್ ಮತ್ತು ವಿಷೇಶ ಆರ್ಥಿಕ ವಲಯ ಲಿಮಿಟೆಡ್‌ಗಳೊಂದಿಗೆ ದೀರ್ಘಾವಧಿ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ" ಎಂದೂ ಅವರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನೇಪಾಳದಿಂದ ಇಂಧನ ದರ ಇಳಿಕೆ
ಉತ್ತರಖಂಡದಲ್ಲಿ ನ್ಯಾನೊಗೆ ಇನ್ನಷ್ಟು ಭೂಮಿ
ಜನವರಿ 27ಕ್ಕೆ ಆರ್‌ಬಿಐನಿಂದ ಆರ್ಥಿಕ ನೀತಿ ವಿಮರ್ಶೆ
ಯುರೋಪ್‌ಗೆ ಎ ಸ್ಟಾರ್‌ ಕಾರುಗಳ ರಫ್ತು: ಮಾರುತಿ
ವಜ್ರಾಭರಣ ಉದ್ಯಮ ಕುಸಿತ:1ಲಕ್ಷ ಉದ್ಯೋಗಿಗಳ ವಜಾ
ಹಣದುಬ್ಬರ ದರ ಶೇ.6.61ಕ್ಕೆ ಇಳಿಕೆ