ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹುಂಡೈ: ಉತ್ಪಾದನೆ ಇಳಿಕೆ, ದರ ಏರಿಕೆ ಸಂಭವ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹುಂಡೈ: ಉತ್ಪಾದನೆ ಇಳಿಕೆ, ದರ ಏರಿಕೆ ಸಂಭವ
ಹುಂಡೈ ಮೋಟಾರ್‌ನ ಭಾರತದ ಮ್ಯಾನೇಜಿಂಗ್ ಡೈರೆಕ್ಟರ್ ಎಚ್.ಎಸ್ ಲಿಹೀಮ್ ಅವರಿಗಿದು ಪರೀಕ್ಷಾ ಸಂದರ್ಭ.

ದೇಶಿಯ ಬೇಡಿಕೆಯಲ್ಲಿ ಇಳಿಕೆ ಸಾಲದೆಂಬಂತೆ, ರಫ್ತು ಮಾರುಕಟ್ಟೆಯಲ್ಲೂ ಬೇಡಿಕೆ ಇಳಿಮುಖವಾಗಿದೆ. ಯುರೋಪಿನಂತಹ ಮಾರುಕಟ್ಟೆಗಳಲ್ಲಿ ಮಾರಾಟ 50 ಪ್ರತಿಶತದಷ್ಟು ಕೆಳಕ್ಕಿಳಿದಿದೆ. ಇದರಿಂದಾಗಿ ಮುಂದಿನ ಎರಡು ತ್ರೈಮಾಸಿಕಗಳ ಅವಧಿಗೆ ಉತ್ಪಾದನೆಯನ್ನು ಕನಿಷ್ಠ 25 ಪ್ರತಿಶತದಷ್ಟಾದರೂ ಕಡಿತಗೊಳಿಸುವುದು ಅನಿವಾರ್ಯವಾಗಿದೆ.

"ಬೇಡಿಕೆ ಬಹಳ ಕೆಳಮಟ್ಟದಲ್ಲಿ ಉಳಿದಿಕೊಂಡಿರುವುದರಿಂದ ಡಿಸೆಂಬರ್ 29ರ ನಂತರ ನಾವು ಈಗಿರುವ ಮೂರು ಪಾಳಿಗೆ ಬದಲು ಎರಡು ಪಾಳಿಯಲ್ಲಿ ಕಾರ್ಯಾಚರಿಸಲಿದ್ದೇವೆ" ಎಂದು ಲಿಹೀಮ್ ಹೇಳಿದ್ದಾರೆ.

ಮುಂದಿನ ವರ್ಷದ ಆರಂಭದಿಂದ ತನ್ನ ಎಲ್ಲಾ ಉತ್ಪನ್ನಗಳ ಮೇಲೆ 2 ಪ್ರತಿಶತದಷ್ಟು ಬೆಲೆಯನ್ನು ಹೆಚ್ಚಿಸುವ ಬಗ್ಗೆ ಹುಂಡೈ ಯೋಜಿಸುತ್ತಿದೆ.

ಆದರೆ, ಇವೆಲ್ಲದರ ಹೊರತಾಗಿಯೂ ಕಂಪೆನಿ ತನ್ನ ಗುರಿಗಳನ್ನು ಮರುಪರಿಶೀಲಿಸಿಲ್ಲ. 10ಪ್ರತಿಶತ ದೇಶಿಯ ಮಾರುಕಟ್ಟೆಯಿಂದ ಸೇರಿದಂತೆ 1,50,000 ಐ20 ರಷ್ಟು ಮಾರಾಟದ ಯೋಜನೆಯನ್ನು 2009ಕ್ಕೆ ಕಂಪೆನಿ ನಿಗದಿ ಪಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮಾರುತಿ: ಹೊಸ ಕಾರುಗಳು ಯುರೋಪಿಗೆ ರಫ್ತು
ನೇಪಾಳದಿಂದ ಇಂಧನ ದರ ಇಳಿಕೆ
ಉತ್ತರಖಂಡದಲ್ಲಿ ನ್ಯಾನೊಗೆ ಇನ್ನಷ್ಟು ಭೂಮಿ
ಜನವರಿ 27ಕ್ಕೆ ಆರ್‌ಬಿಐನಿಂದ ಆರ್ಥಿಕ ನೀತಿ ವಿಮರ್ಶೆ
ಯುರೋಪ್‌ಗೆ ಎ ಸ್ಟಾರ್‌ ಕಾರುಗಳ ರಫ್ತು: ಮಾರುತಿ
ವಜ್ರಾಭರಣ ಉದ್ಯಮ ಕುಸಿತ:1ಲಕ್ಷ ಉದ್ಯೋಗಿಗಳ ವಜಾ