ಇಂಧನ ದರಗಳಲ್ಲಿ ಇಳಿಕೆಯಾದ ಹಿನ್ನೆಲೆಯಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಗಳಾದ ಜೆಟ್ ಏರ್‌ಲೈನ್ಸ್ ಮತ್ತು ಕಿಂಗ್‌ಫಿಶರ್ ಏರ್‌ಲೈನ್ಸ್‌ಗಳು ಪ್ರಯಾಣದರದಲ್ಲಿ ಕಡಿತವನ್ನು ಘೋಷಿಸಿವೆ.
ದೇಶಿಯ ವಿಮಾನಗಳ ಪ್ರಯಾಣ ದರದಲ್ಲಿ ಶೇ.15ರಿಂದ ಶೇ.40 ರವರೆಗೆ ಕಡಿತ ಮಾಡಲಾಗಿದ್ದು ಸೋಮವಾರದಿಂದ ಜಾರಿಗೆ ಬರಲಿದೆ ಎಂದು ಜೆಟ್‌ಏರ್‌ಲೈನ್ಸ್ ನ ವಕ್ತಾರರು ತಿಳಿಸಿದ್ದಾರೆ.
ಕಿಂಗ್‌ಫಿಶರ್ ಏರ್‌ಲೈನ್ಸ್ ಕೂಡಾ ದೇಶಿಯ ವಿಮಾನಗಳ ಪ್ರಯಾಣ ದರದಲ್ಲಿ ಕಡಿತ ಘೋಷಿಸಿದ್ದು, ಜನೆವರಿ 1ರಿಂದ ಜಾರಿಗೆ ಬರಲಿದೆ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ಹೊಸ ವರ್ಷದಿಂದ ಕಿಂಗ್‌ಫಿಶರ್ ಏರ್‌ಲೈನ್ಸ್ ಪ್ರಯಾಣ ದರದಲ್ಲಿ ಇಳಿಕೆ ಮಾಡಿ ಪ್ರಯಾಣಿಕರಿಗೆ ಸುಸಜ್ಜಿತ ಸೌಲಭ್ಯ ಒದಗಿಸಲಿದೆ ಎಂದು ಕಿಂಗ್‌ಫಿಶರ್ ಏರ್‌ಲೈನ್ಸ್ ಮುಖ್ಯಸ್ಥ ವಿಜಯ್ ಮಲ್ಯ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. |