ದೇಶದ ಹಣದುಬ್ಬರ ನಿರೀಕ್ಷಿತ ಪ್ರಮಾಣಕ್ಕಿಂತ ಇಳಿಕೆಯಾಗಿದ್ದರಿಂದ ಭಾರತೀಯಿ ರಿಸರ್ವ್ ಬ್ಯಾಂಕ್ ರೆಪೊ ಮತ್ತು ರಿವರ್ಸ್ ರೆಪೊ ದರಗಳನ್ನು ಶೀಘ್ರದಲ್ಲಿ ಕಡಿತ ಮಾಡುವ ಸಾಧ್ಯತೆಗಳಿವೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.
ಜಾಗತಿಕ ಆರ್ಥಿಕ ಕುಸಿತದಿಂದಾಗಿ ದೇಶದ ವಿವಿಧ ಕ್ಷೇತ್ರಗಳ ಉದ್ಯಮಗಳು ಆರ್ಥಿಕವಾಗಿ ಕುಸಿತಗೊಂಡಿದ್ದರಿಂದ ಆರ್ಥಿಕ ಸಹಾಯವನ್ನು ನೀಡಲು ಆರ್‌ಬಿಐ, ರಿವರ್ಸ್ ರೆಪೊ ದರದಲ್ಲಿ ಶೇ.0.5 ರಿಂದ ಶೇ.1 ರಷ್ಟು ಕಡಿತ ಮಾಡುವ ಸಾಧ್ಯತೆಗಳಿವೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಉಪಮುಖ್ಯಸ್ಥ ಆಶಿಷ್ ಪಾರ್ಥಸಾರಥಿ ಹೇಳಿದ್ದಾರೆ.
ಆರ್ಥಿಕಾಭಿವೃದ್ಧಿಗಾಗಿ ಬ್ಯಾಂಕ್‌ಗಳ ನಗದು ಹಣ ಚಲಾವಣೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಹಲವು ಬಾರಿ ರೆಪೊ, ರಿವರ್ಸ್ ರೆಪೊ ದರಗಳನ್ನು ಕಡಿತ ಮಾಡಿದೆ.
ವಿಜಯ್ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಸಿ ಕಾಲಿಯಾ ಮಾತನಾಡಿ, ಅನೇಕ ಉದ್ಯಮಗಳು ತೊಂದರೆಯಲ್ಲಿರುವುದರಿಂದ ಸೆಂಟ್ರಲ್ ಬ್ಯಾಂಕ್ ಶೇ.0.5 ರಿಂದ ಶೇ.1 ರವರೆಗೆ ರೆಪೊ ಮತ್ತು ರಿವರ್ಸ್ ರೆಪೊ ದರಗಳನ್ನು ಕಡಿತ ಮಾಡುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ. |