ಜಾಗತಿಕ ಆರ್ಥಿಕ ಕುಸಿತದಿಂದಾಗಿ 2007-08ರ ಸಾಲಿನಲ್ಲಿ ಬ್ರಿಟನ್ ಉದ್ಯಮಿಗಳಿಗೆ 200 ಬಿಲಿಯನ್ ಪೌಂಡ್‌ಗಳಷ್ಟು ಹಾನಿಯಾಗಿದ್ದು , ಅದರಲ್ಲಿ ಭಾರತ ಮೂಲದ ಬ್ರಿಟನ್ ನಿವಾಸಿ ಲಕ್ಷ್ಮಿ ಮಿತ್ತಲ್ ಮೊದಲ ಸ್ಥಾನದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬ್ರಿಟನ್ ಉದ್ಯಮಕ್ಕೆ ಎದುರಾದ ಒಟ್ಟು ಮೊತ್ತದ ಹಾನಿಯಲ್ಲಿ ಭಾರತೀಯ ಮೂಲದ ಲಕ್ಷ್ಮಿ ಮಿತ್ತಲ್ ಶೇ.90 ರಷ್ಟು ಪಾಲಿದ್ದು, ಮತ್ತೊಬ್ಬ ಭಾರತೀಯ ಉದ್ಯಮಿ ಅನಿಲ್ ಅಗರ್‌ವಾಲ್ ಹೆಚ್ಚಿನ ಹಾನಿಯನ್ನು ಅನುಭವಿಸಿದ್ದಾರೆ ಎಂದು ಸಂಡೇ ಟೈಮ್ಸ್ ವರದಿ ಮಾಡಿದೆ. ಇಂಗ್ಲೆಂಡ್‌ನ ಒಂದು ಸಾವಿರ ಶ್ರೀಮಂತ ಉದ್ಯಮಿಗಳು ತಮ್ಮ ಒಟ್ಟು ಆಸ್ತಿಯಲ್ಲಿ 412.8 ಬಿಲಿಯನ್ ಪೌಂಡ್‌ಗಳಿಂದ ಶೇ.50 ರಷ್ಟು ನಷ್ಟವನ್ನು ಎದುರಿಸುತ್ತಿದ್ದಾರೆ ಎಂದು ಟೈಮ್ಸ್ ವರದಿ ಮಾಡಿದೆ. ಉಕ್ಕು ಸಾಮ್ರಾಜ್ಯದ ಅಧಿಪತಿಯಾದ ಲಕ್ಷ್ಮಿ ಮಿತ್ತಲ್, ಕಳೆದ ನಾಲ್ಕು ವರ್ಷಗಳಿಂದ ಬ್ರಿಟನ್ ಶ್ರೀಮಂತರ ಪಟ್ಟಿಯಲ್ಲಿ ಮೊದಲನೆ ಸ್ಥಾನದಲ್ಲಿದ್ದು, ಮಿತ್ತಲ್ ಆಸ್ತಿ 27.7 ಬಿಲಿಯನ್‌ಗಳಿಂದ 11 ಬಿಲಿಯನ್ ಪೌಂಡ್‌ಗಳಿಗೆ ಇಳಿಕೆಯಾಗಿದೆ ಎಂದು ಟೈಮ್ಸ್ ಮೂಲಗಳು ವರದಿ ಮಾಡಿವೆ. |