ಹೊಸ ವರ್ಷದ ಆರಂಭದಿಂದ ದೇಶದ ವಿಮಾನಯಾನ ಸಂಸ್ಥೆಗಳು ಪ್ರಯಾಣ ದರಗಳಲ್ಲಿ ಇಳಿಕೆ ಮಾಡಲಿವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್ ಹೇಳಿದ್ದಾರೆ. ಇಂಧನ ದರದಲ್ಲಿ ಇಳಿಕೆಯಾಗಿದ್ದರಿಂದ ವಿಮಾನಯಾನ ಸಂಸ್ಥೆಗಳ ಮೇಲಿರುವ ಒತ್ತಡವನ್ನು ಕಡಿಮೆ ಮಾಡಿದೆ ಎಂದು ಜಾಮನಗರ್‌ಗೆ ಭೇಟಿ ನೀಡಿದ ಸಚಿವ ಪಟೇಲ್ ತಿಳಿಸಿದ್ದಾರೆ. ಇಂಧನ ದರ ಇಳಿಕೆಯಿಂದಾಗಿ ಜನೆವರಿಯಿಂದ ಏರ್ ಇಂಡಿಯಾ ಸೇರಿದಂತೆ ಎಲ್ಲ ಖಾಸಗಿ ವಿಮಾನಯಾನ ಸಂಸ್ಥೆಗಳು ಪ್ರಯಾಣ ದರಗಳನ್ನು ಇಳಿಕೆ ಮಾಡಲಿವೆ ಎಂದು ಸಚಿವ ಪಟೇಲ್ ಹೇಳಿದ್ದಾರೆ.ಕಳೆದ ವರ್ಷದ ಆರಂಭದಲ್ಲಿ ಇಂಧನ ದರ ಏರಿಕೆಯಿಂದಾಗಿ ವಿಮಾನಯಾನ ಸಂಸ್ಥೆಗಳು ಪ್ರಯಾಣ ದರಗಳಲ್ಲಿ ಹೆಚ್ಚಳ ಮಾಡಿದ್ದವು. ಕೆಲ ತಿಂಗಳುಗಳಿಂದ ಇಂಧನ ದರ ಇಳಿಕೆಯಾಗಿದ್ದರಿಂದ ಪ್ರಯಾಣ ದರಗಳಲ್ಲಿ ಕಡಿತಗೊಳಿಸುತ್ತಿವೆ ಎಂದು ತಿಳಿಸಿದರು. ದೇಶದಲ್ಲಿರುವ ವಿಮಾನ ನಿಲ್ದಾಣಗಳಲ್ಲಿ ವ್ಯಾಪಕ ಭಧ್ರತೆ ಏರ್ಪಡಿಸಲಾಗಿದ್ದು ಪ್ರಯಾಣಿಕರ ಹಿತರಕ್ಷಣೆಗಾಗಿ ಭಧ್ರತಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಿಸಲಾಗಿದೆ ಎಂದು ಸಚಿವ ಪಟೇಲ್ ತಿಳಿಸಿದ್ದಾರೆ. |