ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರಗಳು ಇಳಿಕೆಯಾಗಿದ್ದರಿಂದ, ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ ಮತ್ತು ಅನಿಲ ಸಿಲಿಂಡರ್ ದರಗಳಲ್ಲಿ ಇಳಿಕೆ ಮಾಡಲು ಸರಕಾರ ನಿರ್ಧರಿಸಿದೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೇವ್ರಾ ತಿಳಿಸಿದ್ದಾರೆ.ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 37 ರಿಂದ 38 ಡಾಲರ್‌ಗಳಿಗೆ ಇಳಿಕೆಯಾಗಿದ್ದರಿಂದ ಮುಂದಿನ ಕೆಲ ವಾರಗಳಲ್ಲಿ ತೈಲ ದರಗಳಲ್ಲಿ ಇಳಿಕೆ ಮಾಡಲಾಗುವುದು ಎಂದು ಸಚಿವ ದೇವ್ರಾ ಭರವಸೆ ನೀಡಿದ್ದಾರೆ.ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೀಮೆಎಣ್ಣೆ ದಾಖಲೆಯ ಏರಿಕೆ ಕಂಡಿದ್ದರೂ ದೇಶದ ಹೆಚ್ಚಿನ ಬಡಜನತೆ ಸೀಮೆಎಣ್ಣೆಯ ಮೇಲೆ ಅವಲಂಬಿಸಿದ್ದರಿಂದ ಸರಕಾರ ದರವನ್ನು ಹೆಚ್ಚಿಸಿಲ್ಲ ಎಂದು ಹೇಳಿದರು . |