ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ತೈಲ ಬೇಡಿಕೆ ಇಳಿಕೆಯಾಗಿದ್ದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 39 ಡಾಲರ್‌ಗೆ ಸ್ಥಿರವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆನ್ಯೂಯಾರ್ಕ್ ಶೇರುಪೇಟೆಯಲ್ಲಿ ಪೆಬ್ರವರಿ ತಿಂಗಳ ತೈಲ ವಿತರಣೆಯಲ್ಲಿ 15 ಸೆಂಟ್‌ಗಳ ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 38.88ಡಾಲರ್ ನಿಗದಿಯಾಗಿದೆ. ಲಂಡನ್ ಮಾರುಕಟ್ಟೆಯಲ್ಲಿ ಕೂಡಾ 99 ಸೆಂಟ್‌ಗಳ ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 39.03 ಡಾಲರ್‌ಗಳಿಗೆ ಇಳಿಕೆಯಾಗಿದೆ. ಕಳೆದ ಜುಲೈ ತಿಂಗಳಲ್ಲಿ ಪ್ರತಿ ಬ್ಯಾರೆಲ್‌ಗೆ 147.27 ಡಾಲರ್ ದಾಖಲೆಯ ಏರಿಕೆ ಕಂಡಿದ್ದ ತೈಲ,ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ತೈಲ ಬೇಡಿಕೆ ಕುಸಿತವಾಗಿದ್ದರಿಂದ ತೈಲ ದರದಲ್ಲಿ ಇಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಸಕ್ತ ವಾರದಲ್ಲಿ ಇಸ್ರೆಲ್ ಮತ್ತು ಗಾಜಾಪ್ರದೇಶದಲ್ಲಿರುವ ಹಮಾಸ್ ನಡುವೆ ಯುದ್ಧದ ವಾತಾವರಣವಿರುವುದರಿಂದ ಪ್ರತಿ ಬ್ಯಾರೆಲ್‌ಗೆ 33ಡಾಲರ್‌ಗೆ ಇಳಿಕೆಯಾಗಿದ್ದ ತೈಲ ದರ ಮತ್ತೆ 39ಡಾಲರ್‌ಗೆ ಏರಿಕೆಯಾಗಿದೆ ಎಂದು ಒಪೆಕ್ ಮೂಲಗಳು ತಿಳಿಸಿವೆ. |