ಕೇಂದ್ರ ಸರಕಾರ ಮುಂದಿನ ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಕಡಿತ ಮಾಡಲು ಉದ್ದೇಶಿಸಿದೆ ಎಂದು ಕೇಂದ್ರ ಪೆಟ್ರೋಲಿಯಂ ನೈಸರ್ಗಿಕ ಅನಿಲ ಖಾತೆ ಸಚಿವ ಮುರಳಿ ದೇವ್ರಾ ತಿಳಿಸಿದ್ದಾರೆ. ಮುಂಬರುವ ಫೆಬ್ರವರಿ ತಿಂಗಳೊಳಗೆ ಪೆಟ್ರೋಲಿಯಂ ಉತ್ಪನ್ನಗಳ ದರ ಕಡಿತ ಕುರಿತಂತೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಪ್ರಖ್ಯಾತ ಶ್ರೀಕೃಷ್ಣ ದೇವಾಲಯಕ್ಕೆ ಭೇಟಿ ನೀಡಿದ ನಂತರ ಸಚಿವ ದೇವ್ರಾ ಸುದ್ದಿಗಾರರಿಗೆ ತಿಳಿಸಿದರು. ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದಾಗಿ ಅಡುಗೆ ಅನಿಲವನ್ನು ಕೊಳವೆ ಮುಖಾಂತರ ಸರಬರಾಜು ಮಾಡುವ ಯೋಜನೆ ಕೇಂದ್ರ ಸರಕಾರದ ಪರಿಶೀಲನೆಯಲ್ಲಿದೆ ಎಂದು ಸಚಿವ ದೇವ್ರಾ ತಿಳಿಸಿದ್ದಾರೆ. |