ಸಪ್ಟೆಂಬರ್‌ನಿಂದೀಚೆಗೆ ಎಂಟನೇ ಬಾರಿಗೆ ಬೆಲೆ ಇಳಿಕೆ ಮಾಡಿರುವ ತೈಲ ಕಂಪೆನಿಗಳು ವಾಯುಯಾನ ಟರ್ಬೈನ್ ಇಂಧನ(ಎಟಿಎಫ್) ಬೆಲೆಯನ್ನು 6.8 ಪ್ರತಿಶತದಷ್ಟು ಇಳಿಸಿವೆ.
ಬುಧವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಜೆಟ್ ಇಂಧನಗಳ ಬೆಲೆಯನ್ನು 2,234.07ಗಳಷ್ಟು ಕಡಿತಗೊಳಿಸಿ ಕಿ.ಮೀ ಒಂದಕ್ಕೆ 30,457.21 ರೂಗೆ ಇಳಿಸಲಾಗಿದೆ ಎಂದು ರಾಷ್ಟ್ರದ ಅತಿದೊಡ್ಡ ಇಂಧನ ವ್ಯಾಪಾರಸ್ಥರಾಗಿರುವ ಇಡಿಯನ್ ಆಯಿಲ್ ಕಾರ್ಪೋರೇಶನ್ ತಿಳಿಸಿದೆ.
ಈ ಮೊದಲಿನ ಇಂಧನ ದರಗಳಂತೆ ಕಿ.ಮೀ ಒಂದಕ್ಕೆ 32,691.28ರೂ ಗಳು ವೆಚ್ಚವಾಗುತ್ತಿತ್ತು.
ಅಗಸ್ಟ್‌ನಲ್ಲಿ ಎಲ್ಲಾ ಸಮಯದ ಅತಿ ಹೆಚ್ಚು ದರ ಮಟ್ಟ (ರೂ.71,028.26) ತಲುಪಿದ ನಂತರ ಸಪ್ಟೆಂಬರ್‌ನಲ್ಲಿ ದರ ಇಳಿಮುಖವಾಗಿದ್ದು ತದನಂತರ ಈದೀಗ ಎಂಟನೇ ಬಾರಿಗೆ ಇಂಧನ ದರ ಕಡಿತಗೊಳಿಸಲಾಗಿದೆ.
ಪ್ರಸ್ತುತ ಜೆಟ್ ಇಂಧನ ಬೆಲೆಗಳು 2005ರಲ್ಲಿದ್ದ ಮಟ್ಟದಲ್ಲಿವೆ ಮತ್ತು ಈಗಾಗಲೇ ಹಲವು ಏರ್‌ಲೈನ್ಸ್‌ಗಳು ಪ್ರಯಾಣ ದರ ಇಳಿಸುವತ್ತ ಮನಸ್ಸು ಮಾಡಿವೆ.
ರಾಷ್ಟ್ರದ ವ್ಯವಹಾರಿಕ ವಿಮಾನ ನಿಲ್ದಾಣವಾದ ಮುಂಬಯಿಯಲ್ಲಿ ಈ ಹಿಂದಿನ ಕಿ.ಮೀ ಒಂದಕ್ಕೆ 33,719.47 ರೂ. ಬದಲಾಗಿ ಹೊಸವರ್ಷದ ಮೊದಲ ದಿನದಿಂದ 31,378.78 ರೂ ತಗಲಲಿದೆ.
ಕಳೆದ ತಿಂಗಳಿನಿಂದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ ಪೆಟ್ರೋಲಿಯಂ ಜೆಟ್ ಇಂಧನ ಬೆಲೆಗಳನ್ನು ತಿಂಗಳಿಗೆ ಎರಡು ಬಾರಿ- 1ನೇ ಮತ್ತು 16ನೇ ದಿನಾಂಕದಂದು ಪರಿಷ್ಕರಿಸುತ್ತಿದೆ.
ಈ ಮೂರು ಕಂಪೆನಿಗಳು ಡಿಸೆಂಬರ್‌ನಲ್ಲಿ ಮೊದಲು ಕಿ.ಮೀ ಒಂದಕ್ಕೆ 2,480 ರೂ.ಗಳಷ್ಟು ಮತ್ತು ನಂತರ 11 ಪ್ರತಿಶತ ಅಂದರೆ 4,208 ರೂ.ಗಳಷ್ಟು ಜೆಟ್ ಇಂಧನ ಬೆಲೆಯನ್ನು ಕಡಿತಗೊಳಿಸಿದ್ದವು. |