ಉಕ್ರೇನ್‌ಗೆ ಗ್ಯಾಸ್ ಪೂರೈಕೆಯನ್ನು ರಷ್ಯಾ ಗುರುವಾರದಿಂದ ಸಂಪೂರ್ಣವಾಗಿ ಸ್ಥಗಿತಗೊಳಿಸಲಿದೆ ಎಂದು ರಷ್ಯಾದ ಅತಿದೊಡ್ಡ ಗ್ಯಾಸ್ ಕಂಪೆನಿ ಗಾಜ್‌ಪ್ರೋಮ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಳಿದ್ದಾರೆ.
ಇಂಧನ ರವಾನೆಗೆ 2009ರಲ್ಲಿ ಉಕ್ರೇನ್ ಎಷ್ಟು ಬೆಲೆ ಪಾವತಿ ಮಾಡಲಿದೆ ಎಂಬ ಬಗೆಗೆ ಬುಧವಾರ ನಡೆದ ಮಾತುಕತೆಯು ಯಾವುದೇ ಒಪ್ಪಂದವಿಲ್ಲದೆ ಕೊನೆಗೊಂಡಿರುವುದರಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಅಲೆಕ್ಸಿ ಮಿಲ್ಲರ್ ಹೇಳಿದ್ದಾರೆ.
ತಮ್ಮ ಸಾಲವನ್ನು ಸಂದಾಯಗೊಳಿಸಲು ಉಕ್ರೇನ್ ವರ್ಗಾಯಿಸಿದೆ ಎಂದಿರುವ ಮೊತ್ತ ತಮಗೆ ತಲುಪಿಲ್ಲ ಎಂದು ಗಾಜ್‌ಪ್ರೋಮ್ ಹೇಳಿದೆ. ಉಕ್ರೇನ್ 2.1 ಲಕ್ಷ ಯು.ಎಸ್ ಡಾಲರ್‌ಗಳಷ್ಟು ಸಾಲ ಹೊಂದಿದೆ ಎಂದು ಗಾಜ್‌ಪ್ರೋಮ್ ಹೇಳಿದೆ.
ಯುರೋಪಿಯನ್ ಗ್ರಾಹಕರಿಗೆ ಸರಿಯಾದ ಸಮಯದಲ್ಲಿ ಗ್ಯಾಸ್ ತಲುಪಿಸಲು ಗಾಜ್‌ಪ್ರೋಮ್ ಸಂಪೂರ್ಣ ಪ್ರಯತ್ನ ಮಾಡಲಿದೆ ಎಂದು ಮಿಲ್ಲರ್ ಹೇಳಿದ್ದಾರೆ. ರಷ್ಯಾದ ಹೆಚ್ಚಿನ ಎಲ್ಲಾ ಗ್ಯಾಸ್ ರವಾನೆಗಳು ಉಕ್ರೇನ್ ಮೂಲಕವಾಗಿ ಯುರೋಪ್ ತಲುಪುತ್ತವೆ. |